
ಸೈದಾಪುರ:ಏ.೪:ಗ್ರಾಮದ ಅಭಿವೃದ್ಧಿಯಲ್ಲಿ ಸಂಸ್ಕೃತಿ, ಸಂಸ್ಕಾರ ಅತಿ ಮುಖ್ಯವಾಗಿದ್ದೂ ಇದು ಅತಿ ಹೆಚ್ಚು ವಿದ್ಯಾ ವಂತರನ್ನು ಹೊಂದಿದ ಶೆಟ್ಟಿಗೇರಾ ಗ್ರಾಮದಲ್ಲಿ ಜಾತ್ರೆಯ ಮೂಲಕ ಕಾಣುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದನ್ನು ಮುಂದುವರೆಸಿಕೊAಡು ಹೋಗುವ ಶಕ್ತಿ ನಿಮ್ಮದಾಗಲಿ ಎಂದು ಅಬ್ಬೆ ತುಮಕೂರು ವಿಶ್ವರಾಧ್ಯ ಸಿದ್ಧ ಸಂಸ್ಥಾನ ಮಠದ ಡಾ.ಗಂಗಾಧರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಶೆಟ್ಟಿಕೇರಾ ಶ್ರೀ ಗುರು ವೀರಾಂಜನೇಯ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಾಧಿಗಳಿಗೆ ಆಶೀರ್ವಚನ ನೀಡಿ ಮಾತನಾಡಿದರು. ಜಾತ್ರೆಗಳು ಭಾವೈಕ್ಯತೆಯ ತಾಣಗಳು ಅಲ್ಲದೆ ಉತ್ತಮ ಆಧ್ಯಾತ್ಮಿಕ ಜ್ಞಾನವನ್ನು ನೀಡಲು ನೆರವಾಗುತ್ತವೆ. ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ಅದ್ಧೂರಿಯಾಗಿ ಮೂಡಿ ಬಂದಿವೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದೂ ಶ್ರೀ ಗುರು ವೀರಾಂಜನೇಯ ಸಕಲರಿಗೆ ಉತ್ತಮ ಶಕ್ತಿಯನ್ನು ನೀಡಲಿ. ಈ ಭಾಗದ ಎಲ್ಲರ ಅಭಿವೃದ್ದಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಲ್ಲಣ್ಣಗೌಡ ಕೌಳೂರು, ಬಸರೆಡ್ಡಿ ಅನಪೂರು, ಸಿದ್ದಲಿಂಗರೆಡ್ಡಿಗೌಡ ಉಳ್ಳೆಸೂಗುರು, ಗುಂಜಲಪ್ಪ ಬೈಲಪನೋರ, ಶರಣಪ್ಪ ದಳಪತಿ, ಬಸವರಾಜ ಅರ್ಜುನಿಗಿ, ದಶರಥ ಸೂರಮನೋರು, ಸ್ನೇಹಿತರ ಬಳಗದ ಸದಸ್ಯರು, ಗ್ರಾಮದ ಮುಖಂಡರು, ಗುರು ಹಿರಿಯರು, ಯುವಕರು ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳಿಂದ ಅಪಾರ ಪ್ರಮಾಣದ ಭಕ್ತಾಧಿಗಳು ಭಾಗವಹಿಸಿದ್ದರು.






















