
ಸೈದಾಪುರ:ಏ.೨:ಅನ್ನ, ಅಕ್ಷರ, ಆಶ್ರಯ ನೀಡಿದ ತ್ರೀವಿಧ ದಾಸೋಹಿ ನಡೆದಾಡುವ ದೇವೆರೆಂದೇ ಖ್ಯಾತರಾದ ಶತಾಯುಷಿ ಡಾ.ಶಿವಕುಮಾರ ಮಹಾಸ್ವಾಮಿಗಳ ಸೇವೆಯನ್ನು ಸ್ಮರಿಸುವ ಶ್ರೇಷ್ಠ ದಿನಾ ಇದಾಗಿದೆ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಳಿಂದ ಹಮ್ಮಿಕೊಂಡ ಡಾ.ಶಿವಕುಮಾರ ಮಹಾಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರ ಬದುಕು ಮತ್ತು ಸಾಧನೆಗಳು ನಮಗೆ ಚೈತನ್ಯವನ್ನುಂಟು ಮಾಡುವಂತಾಗಿದೆ. ಅವರ ಸೇವಾ ಮನೋಭಾವನೆಯ ಗುಣಗಳನ್ನು, ಆದರ್ಶ ತತ್ವವಗಳನ್ನು ಪ್ರತಿಯೊಬ್ಬರು ತಮ್ಮ ತಮ್ಮ ಕಾಯಕದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜವನ್ನು ಕಂಡು ಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಹಿರಿಯ ಶಿಕ್ಷಕರಾದ ಗೂಳಪ್ಪ.ಎಸ್.ಮಲ್ಹಾರ, ರಾಚಯ್ಯ ಸ್ವಾಮಿ ಬಾಡಿಯಾಲ, ರಾಜಶೇಖರ ಪಾಟೀಲ, ಹಣಮರಡ್ಡಿ ಮೋಟ್ನಳ್ಳಿ, ಆನಂದ ಪಾಟೀಲ ಸಂಗಾರೆಡ್ಡಿ, ಅಭಿಲಾಷ, ಅನುರಾಧ, ಮಧು, ಡಿ.ಎಲ್.ಇಡಿ ಪ್ರಶಿಕ್ಷಣಾರ್ಥಿಳು ಸೇರಿದಂತೆ ಇತರರಿದ್ದರು.

























