Home ಜಿಲ್ಲೆ ಬೆಂಗಳೂರು ಗಣಿತ ವಿಷಯಕ್ಕೆ ೨೦೯ ಮಂದಿ ವಿದ್ಯಾರ್ಥಿಗಳು ಗೈರು

ಗಣಿತ ವಿಷಯಕ್ಕೆ ೨೦೯ ಮಂದಿ ವಿದ್ಯಾರ್ಥಿಗಳು ಗೈರು

ಕೋಲಾರ,ಮಾ,೩೦- ಜಿಲ್ಲೆಯ ೬೫ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ೪ನೇ ದಿನದ ಪರೀಕ್ಷೆ ಶನಿವಾರ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ೨೦೯ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ತಿಳಿಸಿದರು.


ಪರೀಕ್ಷೆ ಮುಗಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಗಣಿತ ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ ೧೮೯೫೬ ಹೊಸ ವಿದ್ಯಾರ್ಥಿಗಳ ಪೈಕಿ ೧೮೭೪೭ ಮಂದಿ ಹಾಜರಾಗಿದ್ದು, ೨೦೯ ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದ್ದು, ಶೇ.೯೮.೯೦ ಹಾಜರಿ ಇದೆ ಎಂದು ತಿಳಿಸಿದರು.


ಸಿಸಿ ಕ್ಯಾಮರಾ,ವೆಬ್ ಕಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಯುತ್ತಿರುವ ೪ನೇ ವರ್ಷದ ಪರೀಕ್ಷೆ ಇದಾಗಿದ್ದು, ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮಾರ ಸುಸ್ಥಿತಿಯಲ್ಲಿಡಲಾಗಿದೆ. ಪರೀಕ್ಷಾ ಅವಧಿಯಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಅಧಿಕಾರಿಗಳು ವೀಕ್ಷಿಸುತ್ತಿದ್ದು, ಯಾವುದೇ ಲೋಪ ಕಂಡು ಬರಲಿಲ್ಲ ಎಂದರು.


ಬಂಗಾರಪೇಟೆ ತಾಲ್ಲೂಕಿನ ೮ ಕೇಂದ್ರಗಳಲ್ಲಿ ಗಣಿತ ವಿಷಯಕ್ಕೆ ೨೫೩೮ ಮಂದಿ ನೊಂದಾಯಿಸಿದ್ದು, ೨೫೧೭ ಮಂದಿ ಹಾಜರಾಗಿ ೨೧ ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ ೯ ಕೇಂದ್ರಗಳಲ್ಲಿ ೩೨೪೩ ಮಕ್ಕಳು ಹೆಸರು ನೊಂದಾಯಿಸಿದ್ದು, ೩೨೦೮ ಮಂದಿ ಹಾಜರಾಗಿ ೩೫ ಮಂದಿ ಗೈರಾಗಿದ್ದಾರೆ.


ಕೋಲಾರ ತಾಲ್ಲೂಕಿನ ೧೮ ಕೇಂದ್ರಗಳಲ್ಲಿ ೪೭೩೩ ಮಂದಿ ಹೆಸರು ನೊಂದಾಯಿಸಿದ್ದು, ೪೭೮೯ ಮಂದಿ ಹಾಜರಾಗಿ ೪೪ ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ ೮ ಕೇಂದ್ರಗಳಲ್ಲಿ ೨೯೭೪ ಮಂದಿ ಹೆಸರು ನೊಂದಾಯಿಸಿದ್ದು, ೨೯೩೯ ಮಂದಿ ಹಾಜರಾಗಿದ್ದು, ೩೫ ಮಂದಿ ಗೈರಾಗಿದ್ದಾರೆ.


ಮುಳಬಾಗಿಲು ತಾಲ್ಲೂಕಿನ ೧೨ ಕೇಂದ್ರಗಳಲ್ಲಿ ೨೮೧೨ ಮಂದಿ ನೊಂದಾಯಿಸಿದ್ದು, ೨೭೬೦ ಮಂದಿ ಹಾಜರಾಗಿದ್ದು, ೫೨ ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ ೧೦ ಕೇಂದ್ರಗಳಲ್ಲಿ ೨೫೫೬ ಮಂದಿ ಹೆಸರು ನೊಂದಾಯಿಸಿದ್ದು, ೨೫೩೪ ಮಂದಿ ಹಾಜರಾಗಿದ್ದು, ೨೨ ಮಂದಿ ಗೈರಾಗಿದ್ದಾರೆ.


ನಾಲ್ಕನೇ ದಿನದ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಎಲ್ಲೂ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.


ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್, ಶಿಕ್ಷಣಾಧಿಕಾರಿ ಡಾ.ವೀಣಾ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ, ಡಿವೈಪಿಸಿಗಳಾದ ರಾಜೇಶ್ವರಿ, ಸೈಹಿದಾ ನಾಹಿದಾ ಫಾತಿಮಾ, ಬಿಇಒಗಳಾದ ಮಧುಮಾಲತಿ ಪಡುವಣೆ, ವಿವಿಧ ತಾಲ್ಲೂಕುಗಳ ಬಿಇಒಗಳಾದ ಶಶಿಕಲಾ, ನಾರಾಯಣಸ್ವಾಮಿ, ಕೆಂಪಯ್ಯ, ರಾಮಚಂದ್ರ, ಮುನಿಲಕ್ಷ್ಮಯ್ಯ, ಎವೈಪಿಸಿ ಗಾಯತ್ರಿ, ವಿಷಯ ಪರಿವೀಕ್ಷಕರಾದ ಸಮೀವುಲ್ಲಾ, ಕ್ರಿಸ್ಟಿನಾಬಬಿತಾ,ತಾಲ್ಲೂಕು ನೋಡಲ್ ಅಧಿಕಾರಿ ಇಸಿಒ ರಾಧಾ ಮತ್ತಿತರರು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರದ ಅಂಜುಮಾನ್ ಶಾಲೆ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರಾಗಿ ವೇಣುಗೋಪಾಲ್, ಪ್ರಶ್ನೆಪತ್ರಿಕಾ ಪಾಲಕರಾಗಿ ಮಂಜುಳಾ, ಸ್ಥಾನಿಕ ಜಾಗೃತದಳ ಅಧಿಕಾರಿಯಾಗಿ ಗಂಗಾಧರಮೂರ್ತಿ ಕಾರ್ಯನಿರ್ವಹಿಸಿದರು.