Home ಜಿಲ್ಲೆ ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ:ಲಿಂಗಾರಡ್ಡಿ ನಾಯಕ

ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ:ಲಿಂಗಾರಡ್ಡಿ ನಾಯಕ

ಸೈದಾಪುರ:ಮಾ.9:ಗಡಿ ಗ್ರಾಮೀಣ ಭಾಗದ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡು ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ವೆಂಕಟೇಶ್ವರಲು ಅವರ ಸಾಧನೆ ಇನ್ನೂ ಹೆಚ್ಚಿನದಾಗಲಿ ಎಂದು ಪ್ರೌಢ ಶಾಲಾ ಮುಖ್ಯಗುರು ಲಿಂಗಾರಡ್ಡಿ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ ಈದೀಗ ದದ್ದಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್ವರಲು ಅವರಿಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ರಾಜ್ಯ ಮಟ್ಟದ ಮಹಾತ್ಮ ಜ್ಯೋತಿಬಾ ಫುಲೆ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಾರಣ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದಿಸಿದ ಮಾತನಾಡಿದರು. ಸೇವಾ ಮನೋಭಾವನೆಯೊಂದಿಗೆ ಕಾರ್ಯ ನಿರ್ವಹಿಸಿದರೆ ಉತ್ತಮ ಗೌರವಕ್ಕೆ ನಾವು ಪಾತ್ರರಾಗುತ್ತೇವೆ. ಇದಿ ಇವರ ಸಾಧನೆಯಲ್ಲಿ ಕಾಣುತ್ತೇವೆ ಎಂದು ಹೇಳಿದರು.
ವೆಂಕಟೇಶ್ವಚರಲು ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಕಲಿತ ಶಾಲೆಯಲ್ಲಿ ಈ ವಿದಧ ಗೌರವಕ್ಕೆ ಪಾತ್ರಾರಾಗುತ್ತಿರುವುದು ಸಂಸತಸವನ್ನುಂಟು ಮಾಡಿದೆ. ಈ ವಿದಧ ಸಾಧನೆಗೆ ಎಲ್ಲರ ಸಹಕಾರ ಇದೆ. ಪ್ರಶಸ್ತಿ ನನ್ನ ಜವಬ್ದಾರಿಯನ್ನು ಇನ್ನು ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಗೂಳಪ್ಪ.ಎಸ್.ಮಲ್ಹಾರ, ವಿಶ್ವನಾಥರಡ್ಡಿ ಕಣೇಕಲ, ರಾಜಶೇಖರ ಪಾಟೀಲ, ಶಿವುಕುಮಾರ ಬಂಡಿ, ಸಂಗಾರಡ್ಡಿ, ಅನುರಾಧ, ವನಜಾಕ್ಷಿ, ಭಾಗ್ಯಶ್ರೀ, ಮಧು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.