
ಆನೇಕಲ್. ಮಾ. ೨ – ಅತ್ತಿಬೆಲೆಯ ಹಂಸರಾಗ ಮಲ್ಪಿ ಸ್ಪೆಷಾಲಿಟಿ ಆಸ್ಪತ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಇಂಡಿಯನ್ ರೆಡ್ ಕ್ರಾಸ್ ಬ್ಲೆಡ್ ಸ್ಟೋರೆಜ್ ಘಟಕಕಕ್ಕೆ ಹಂಸರಾಗ ಮಲ್ಪಿ ಸ್ಪೆಷಾಲಿಟಿ ಆಸ್ಪತ್ತೆಯ ಮುಖ್ಯಸ್ಥರು ಮತ್ತು ಇಂಡಿಯನ್ ರೆಡ್ ಕ್ರಾಸ್ ಸೂಸೈಟಿ ಕರ್ನಾಟಕ ಬ್ರಾಂಚ್ ನ ಮುಖ್ಯಸ್ಥರು ಚಾಲನೆ ನೀಡಿ ಶುಭ ಹಾರೈಸಿದರು.
ರೋಗಿಗಳಿಗೆ ತ್ವರಿತಗತಿಯಲ್ಲಿ ಗುಣಮಟ್ಟದ ರಕ್ತ ಪೂರೈಸಬೇಕು ಮತ್ತು ಬ್ಲೆಡ್ ಪ್ಲಾಸ್ಮ. ಪ್ಲೇಟ್ ಲೆಸ್ ಸೇರಿದಂತೆ ಎಲ್ಲಾ ಮಾದರಿಯ ರಕ್ತವನ್ನು ಪೂರೈಸಬೇಕು ಎಂಬುವ ಉದ್ದೇಶದಿಂದ ಹಂಸರಾಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ತೆಯಲ್ಲಿ ನೂತನವಾಗಿ ಇಂಡಿಯನ್ ರೆಡ್ ಕ್ರಾಸ್ ಬ್ಲೆಡ್ ಸ್ಟೋರೆಜ್ ಘಟಕವನ್ನು ಪ್ರಾರಂಭಿಸಲಾಗಿದ್ದು ಸಾರ್ವಜನಿಕರು ಈ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಂಸರಾಗ ಮಲ್ಪಿ ಸ್ಪೆಷಾಲಿಟಿ ಆಸ್ಪತ್ತೆಯ ಮುಖ್ಯಸ್ಥರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅದಿಕಾರಿಯಾದ ಡಾ|| ಬಾಸ್ಕರ್ ರಾವ್. ಇಂಡಿಯನ್ ರೆಡ್ ಕ್ರಾಸ್ ಸೂಸೈಟಿಯ ಚೇರ್‍ಮೆನ್ ಬಸವರೂರ್ ರಾಜೀವ್ ಶೆಟ್ಟಿ. ಮ್ಯಾನೇಜರ್ ಉಮಾಕಾಂತ್, ಹಂಸರಾಗ ಮಲ್ಪಿ ಸ್ಪೆಷಾಲಿಟಿ ಆಸ್ಪತ್ತೆಯ ಸಿಇಓ ಡಾ|| ಕೆ.ಎನ್ ಹರ್ಷ. ಐಎಂಎಯ ಅಧ್ಯಕ್ಷರು ಹೋಸೂರು ಬ್ರಾಂಚ್‌ನ ಡಾ|| ರಾಮಾನುಜ. ಹಂಸರಾಗ ಮಲ್ಪಿ ಸ್ಪೆಷಾಲಿಟಿ ಆಸ್ಪತ್ತೆಯ ಡೈರೆಕ್ಟರ್ ಡಾ|| ಗಂಗಾದರಯ್ಯ. ಸ್ತೀ ತಜ್ಞರಾದ ಡಾ|| ಶಶಿಕಲಾ ಕಾರಂತ್ ಮೊದಲಾದವರು ಹಾಜರಿದ್ದರು.























