ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿಯ ಶ್ರೀ ಭೂತಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಭೂತಪ್ಪ ಸ್ವಾಮಿ ಕೃಪಾ ಪೋಷಿತ ನಾಟಕ ಮಿತ್ರ ಮಂಡಳಿ ವತಿಯಿಂದ “ರಾಜ ಸತ್ಯ ವ್ರತ ಅಥವಾ ಶನಿಪ್ರಭಾವ” ಎಂಬ ಪೌರಾಣಿಕ ನಾಟಕವನ್ನು ಶಾಸಕರಾದ ಎಸ್. ಟಿ. ಸೋಮಶೇಖರ್ ಅವರ ಸಹಕಾರದೊಂದಿಗೆ ಹಾಗೂ ನಾಗದೇವನಹಳ್ಳಿ ಜಿಬಿಎ ವಾರ್ಡಿನ ಕಾಂಗ್ರೆಸ್ ಮುಖಂಡ ದೇವರಾಜ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು. ಶನೇಶ್ವರ ಪಾತ್ರದಲ್ಲಿ ಚಿತ್ತಪ್ಪ, ನಾಗಣ್ಣ ಹಾಗೂ ದೊಡ್ಡಯ್ಯ ಚಂದ್ರಹಾಸೆ ಪಾತ್ರದಲ್ಲಿ ಅಭಿನಯಿಸಿದ್ದರು. ನಾಗದೇವನಹಳ್ಳಿ ಹಿರಿಯ ಮುಖಂಡ ಮಲ್ಲಯ್ಯ, ಡ್ರಾಮಾ ಮ್ಯಾನೇಜರ್ ಸಿರಿಯಪ್ಪ, ರಂಗಸ್ಥಳದ ಮೇಲ್ವಿಚಾರಕರಾದ( ಸ್ಟೇಜ್ ಮ್ಯಾನೇಜರ್ )ಮೇಳಪ್ಪ, ಹಾಗೂ ಕೆ. ತಮ್ಮಯ್ಯ, ಕಾಂಗ್ರೆಸ್ ಯುವ ಮುಖಂಡ ನವೀನ್, ದೊಡ್ಡಗೊಲ್ಲರಟ್ಟಿ ಕೃಷ್ಣಪ್ಪ, ಉಮೇಶ್, ನಾಗದೇವನಹಳ್ಳಿಯ ಸಾರ್ವಜನಿಕರು ಉಪಸ್ಥಿತರಿದ್ದರು.