
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಜೂ.29: ಮಾದಕ ವಸ್ತುಗಳಾದ ಸಾರಾಯಿ, ಗಾಂಜಾ, ಬೀಡಿ ಸಿಗರೇಟ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕ ಇವುಗಳಿಂದ ದೂರವಿರಿ ಎಂದು ಪಿಎಸ್ಐ ಗೀತಾಂಜಲಿ ಸಿಂಧೇ ತಿಳಿಸಿದರು. ತಾಲ್ಲೂಕಿನ ತೊಟ್ಟಿಲ ಮಠ ವಲಯದ ತೊಟ್ಟಿಲ ಮಠ ಕಾರ್ಯಕ್ಷೇತ್ರದಲ್ಲಿ ಸ್ವ ಸಹಾಯ ಮತ್ತು ಪ್ರಗತಿ ಬಂದು ಸಂಘದ ಸದಸ್ಯರಿಗೆ ಮಾದಕ ವಸ್ತು ವಿರೋಧಿ ದಿನಾಚರಣೆ ಮತ್ತು ಲಾಭಾಂಶ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಕುರಿತು ಮಾತಾನಾಡಿದರು.
ನಂತರ ಸಂಘದ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತಾನಾಡಿದ, ಯೋಜನೆಯ ಸಮುದಾಯ ಅಭಿವೃದ್ಧಿಯ ವಿವಿಧ ಕಾರ್ಯಕ್ರಮಗಳಲ್ಲಿ ಜನಜಾಗೃತಿ ವೇದಿಕೆಯ ಮದ್ಯಾವರ್ಜನಾ ಶಿಬಿರದ ಬಗ್ಗೆ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳು ಶಾಲಾ ಕಾಲೇಜ್ ಗಳಲ್ಲಿ ಮಾಡಲಾಗುತ್ತಿದೆ
ಮಾದಕ ವಸ್ತುಗಳು ಸೇವನೆಯಿಂದ ಸಂಸಾರದಲ್ಲಿ ಆಗುವ ತೊಂದರೆ ಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮರಿಸ್ವಾಮಿ ಮಾತಾನಾಡಿದರು.
ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸಿದ್ದಯ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಯೋಗೇಶ್ವರ್ ದಿನ್ನೇ, ಪಟ್ಟಣ ಪಂಚಾಯತ್ ಸದಸ್ಯೆ ವಿದ್ಯಾಶ್ರೀ, ಒಕ್ಕೂಟದ ಅಧ್ಯಕ್ಷೆ ಉಮಾದೇವಿ, ಈರಮ್ಮ ಯೋಜನಾಧಿಕಾರಿ ನವೀನ್ ಕುಮಾರ್, ಕೃಷಿ ಮೇಲ್ವಿಚಾರಕರು ಮಹಾಂತೇಶ, ಮೇಲ್ವಿಚಾರಕರು ಜಗದೀಶ್ ಹಾಗೂ ಸೇವಾಪ್ರತಿನಿಧಿ ಗಳು ಪೂರ್ಣಿಮ, ಪ್ರೇಮ, ನೇತ್ರಾವತಿ, ಕಿರಣ್, ಅಶ್ವಿನಿ ಇದ್ದರು.