ಸಂಗನಬಸವ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಶುಭಾರಂಭ

ವಿಜಯಪುರ,ಜೂ.10: ಸಂಗನಬಸವ ಶಾಲೆಯ ಶೈಕ್ಷಣಿಕ ವರ್ಷದ ಶುಭಾರಂಭವು ಸರಸ್ವತಿ ಪೂಜೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶ್ರೀ ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲೆಯ ಅಭಿವೃದ್ಧಿಯ ಮತ್ತು ಮಕ್ಕಳ ಭವಿಷ್ಯದ ಕುರಿತು ಮಾತನಾಡಿದರು.
ಶಾಲೆಯ ಪ್ರಾಂಶುಪಾಲೆ ಶರ್ಮಿಳಾ ಹೇಮಂತ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಶಾಲೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು, ಹಿಂದಿನ ವರ್ಷದ 10 ನೇ ತರಗತಿಯ ಫಲಿತಾಂಶದ ಬಗ್ಗೆ ವಿವರಣೆ ನೀಡಿದರು.
ಶಾಲಾ ಕಾಲೇಜಿನ ನಿರ್ದೇಶಕ ಪ್ರಾಂಶುಪಾಲ ಹೇಮಂತ ಕೃಷ್ಣ ಉಡುಪಿ ಮಾತನಾಡಿ, ಮಕ್ಕಳಿಗೆ ಉದಾತ್ತವಾದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಬೆಳವಣಿಗೆಯ ಬಗೆಗೆ ವಿವರಿಸಿ ಒಳ್ಳೆಯ ಪ್ರಯತ್ನದಿಂದ ಸಫಲತೆಯನ್ನು ಗಳಿಸಬಹುದು ಎಂದು ನುಡಿದರು. ಹಿಂದಿನ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ವಿವರಣೆ ನೀಡಿದರು.
ಶ್ರೀ ಸಿದ್ಧೇಶ್ವರ ಸಂಸ್ಥೆಯ ಆಡಳಿತ ಮಂಡಳಿಯ ಸದಾನಂದ ದೇಸಾಯಿ, ಮಲ್ಲಿಕಾರ್ಜುನ ಸಜ್ಜನ, ಶಿವಾನಂದ ನೀಲಾ, ಎನ್.ಎಂ. ಗೋಲಾಯಿ, ವಿಜಯಕುಮಾರ ಡೋಣಿ, ಮಲಕಪ್ಪ ಗಾಣೀಗೆರ ಅವರು ಉಪಸ್ಥಿತರಿದ್ದರು.
ಶಾಲೆಯ ಅಧ್ಯಾಪಕಿ ವೀರಬಸವ್ವ ಎಮ್. ಜಿ. ಸ್ವಾಗತಿಸಿದರು. ಅಧ್ಯಾಪಕ ಗುರುದೇವ್‍ಎನ್. ಹೋಳಿ ನಿರೂಪಿಸಿದರು.
ಶಾಲೆಯ ಅಧ್ಯಾಪಕಿ ಮೃಗಾಂಶೀಖಾ ಮೋರೆ ವಂದಿಸಿದರು.