
ಕೆಜಿಎಫ್:ಜೂ:೪- ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ರವರ ೧೦೧ ನೇ ಜನ್ಮಾ ದಿನಾಚರಣೆ ಅಂಗವಾಗಿ ಕೆಜಿಎಫ್ ಡಿಎಂಕೆ ಪಕ್ಷದ ಕಾರ್ಯಕರ್ತರು ನಗರದ ಗಾಂಧಿವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಡಿಎಂಕೆ ಪಕ್ಷದ ಗೌರವ ಅಧ್ಯಕ್ಷ ಮುನಿರತ್ನಂ ದಿವಂಗತ ಮಾಜಿ ಮುಖ್ಯಮಂತ್ರಿ ಕರುಣಾನಿಧಿರವರು ತಮಿಳು ಭಾಷೆಯನ್ನು ಉಳಿಸಿ ಬೆಳಸುವ ಕೆಲಸವನ್ನು ಮಾಡಿಕೊಂಡು ಬಂದ ದಿಮಂತ ನಾಯಕರಾಗಿದ್ದು ಅವರು ತಮಿಳುನಾಡಿನಲ್ಲಿ ಮುಖ್ಯಮಂತ್ರಿಗಳಾಗಿ ಕಡು ಬಡ ಕುಟುಂಬಗಳಿಗೆ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಹೇಳಿದರು.
ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿವಂಗತ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ರವರಿಗೆ ಬಡವರ ಬಗ್ಗೆ ಕಾಳಜಿ ಹೊಂದಿದ್ದರಿಂದ ಹಲವು ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದರು ಅವರು ಜಾರಿಗೊಳಿಸಿದ ಯೋಜನೆಗಳನ್ನು ಇಂದಿನ ಮುಖ್ಯಮಂತ್ರಿ ಸ್ಟಾಲಿನ್ ಮುಂದುವರೆಸಿಕೊಂಡು ಹೋಗುತ್ತಿರುವುದರಿಂದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ಏನೇ ಕೂಗಾಟ ನಡೆಸಿದರು ಡಿಎಂಕೆ ಪಕ್ಷ ಮರಳಿ ಅಧಿಕಾರಕ್ಕೆ ಬರಲಿದೆ ಎಂದರು.
ಯುವ ಮುಖಂಡ ರಂಜೀತ್ಕುಮಾರ್ ಮಾತನಾಡಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ರವರು ತಮಿಳು ಭಾಷೆಯ ಅಭಿವೃದ್ಧಿಗಾಗಿ ಶ್ರಮಿಸಿದ ದಿಮಂತ ನಾಯಕ ಅವರ ಪುತ್ರ ಸ್ಟಾಲಿನ್ ಸಹ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು ಬಿಜೆಪಿ ಪಕ್ಷವು ಡಿಎಂಕೆ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಹುನ್ನಾರ ನಡೆಸುತ್ತಿದೆ ಆದರೆ ಡಿಎಂಕೆ ಪಕ್ಷವು ತಮಿಳುನಾಡಿನ ಜನರ ಮನಸ್ಸಿನಲ್ಲಿ ನೆಲೆಯಾಗಿ ನಿಂತಿರುವುದರಿಂದ ೨೦೨೬ ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬರ್ಜರಿ ಜಯಪಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರುಣನಿಧಿ ರವರ ಭಾವಚಿತ್ರಕ್ಕೆ ಪುಷ್ಪಮಾಲೆಯನ್ನು ಹಾಕಿ ಜನ್ಮ ದಿನಾಚರಣೆಯನ್ನು ಆಚರಿಸಿದರು.
ಈವೇಳೆ ಡಿಎಂಕೆ ಮುಖಂಡರಾದ ಗೌರವ ಅಧ್ಯಕ್ಷ ಮುನಿರತ್ನಂ, ಚಕ್ರಪಾಣಿ,ಏಸು,ಕಣ್ಣನ್ ,ರವೀಂದ್ರ ಮುರುಗನ್ ಶಿವ ಹಾಜರಿದ್ದರು.