ಕಲಬುರಗಿ:ಮೇ.30: ಸರಕಾರಿ ಬಾಲಕಿಯರ ಪ್ರೌಢ ಶಾಲೆ ಕಲಬುರಗಿ ಜಗತ್ ಶಾಲೆಯಲ್ಲಿ ಶಾಲಾ ಆರಂಭೋತ್ಸವ ಕಾರ್ಯಕ್ರಮ ನಡೆಸಲಾಯಿತು. ಶಾಲೆಯನ್ನು ಸ್ವಚ್ಛಗೊಳಿಸಿ ತಳಿರು. ತೋರಣ ಕಟ್ಟಿ ಶೃಂಗರಿಸಲಾಯಿತು. ಈ ಕಾರ್ಯಕ್ರಮಕ್ಕೆ ಉಪನಿರ್ದೇಶಕರು ಅಭಿವೃದ್ಧಿ ಡಯಟ್ ಯಾದಗೀರನ್ ವೃಷಭೇಂದ್ರಯ್ಯ, ಎಸ್. ಎಸ್. ಎಲ್. ಸಿ. ಉಪನಿರ್ದೇಶಕರು ಡಿವಾಯ್ಪಿಸಿ ಚಂದ್ರಶೇಖರ ಪಾಟೀಲ್, ಜಿಲ್ಲಾ ದೈಹಿಕ ಶಿಖಣಾಧಿಕಾರಿ ರಾಜಶೇಖರ್ ಗೋನಾಯಕ್, ಉಪಪ್ರಚಾರ್ಯ ವಿಜಯಕುಮಾರ್ ವಿ ಬೆಳಮಗಿ,ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ಆರ್ ಡಾಂಗೆ, ಉಪನ್ಯಾಸಕರಾದ ಶರನಗೌಡ ಪಾಟೀಲ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳು ಸಂತೋಷ ಸಂಭ್ರಮದಿಂದ ಪ್ರಾರಂಭೋತ್ಸವದಲ್ಲಿ ಭಾಗಿಯಾದರು. ಮಕ್ಕಳಿಗೆ ಹಾಲು, ಹೂ ಗುಚ್ಛ ನೀಡಿ ಪಠ್ಯ ಪುಸ್ತಕ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು.