Home Uncategorized 2026ರ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ದಾಖಲೆ ಶ್ರೀ ಶೈಲೇಶ್ವರ ವಿದ್ಯಾಕೇಂದ್ರ

2026ರ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ದಾಖಲೆ ಶ್ರೀ ಶೈಲೇಶ್ವರ ವಿದ್ಯಾಕೇಂದ್ರ

ಸಂಜೆವಾಣಿ ವಾರ್ತೆ

ಸಂಡೂರು :ಏ:12 ಸಂಡೂರು ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಎಸ್ ವಿ  ನಾನಾವಟೆ ಪಿ ಯು ಕಾಲೇಜು 2026ರ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಯಾರ್ಂಕ್ ಹಾಗೂ ಅಖಂಡ ಬಳ್ಳಾರಿ ಜಿಲ್ಲೆಗೆ ದ್ವಿತೀಯ ಯಾರ್ಂಕ್ ಪಡೆದ ಸುದೀಪ ಹೆಚ್ ಹಾಗೂ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಯಾರ್ಂಕ್ ಹಾಗೂ ಅಖಂಡ ಬಳ್ಳಾರಿ ಜಿಲ್ಲೆಗೆ 2 ನೇ ಯಾರ್ಂಕ್ ಪಡೆದ ಸಂಜನಾ ಎನ್ ಇವರನ್ನು ಅಖಂಡ ಬಳ್ಳಾರಿ ಸಂಸದರಾದ ತುಕಾರಾಮ್ ಈ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಮ್ ಇವರೀರ್ವರೂ  ಸನ್ಮಾನಿಸಿ,ಸಿಹಿ ತಿನ್ನಿಸಿ ಅಭಿನಂದಿಸಿದರು

ಈ ಸಂದರ್ಭದಲ್ಲಿ ಶ್ರೀ ಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್ ನಾನಾವಟೆ,ಕುಮಾರ್ ಎಸ್ ನಾನಾವಟೆ,ಪ್ರಾಂಶುಪಾಲ ಜಯಪ್ರಕಾಶ, ಡೀನ್

ನಾಗೇಂದ್ರ ಪ್ರಸಾದ್, ಆನಂದ ಸಾಳುಂಕೆ,ಗೋಣಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು