Home ಜಿಲ್ಲೆ ಪುಸ್ತಕ, ಶಾಲಾ ಬ್ಯಾಗ್ ವಿತರಣೆ

ಪುಸ್ತಕ, ಶಾಲಾ ಬ್ಯಾಗ್ ವಿತರಣೆ

ಹುಬ್ಬಳ್ಳಿ,ಜೂ೨೦: ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದಿ ಕರ್ನಾಟಕ ನ್ಯಾಷನಲ್ ಇಂಗ್ಲಿಷ್ ಶಾಲೆಯಲ್ಲಿ ವೆಂಕಟೇಶ್ ಕಾಟವೆ ನೇತೃತ್ವದ ವಿ.ಎ.ಕೆ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಪುಸ್ತಕಗಳು ಹಾಗೂ ಪರೀಕ್ಷಾ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ಕಾಟವೆ ಅವರು,ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲ ಅಡಿಪಾಯ. ಇಂದಿನ ಮಕ್ಕಳು ನಾಳಿನ ದೇಶದ ಪ್ರಜೆಗಳು ಮತ್ತು ನಾಯಕರಾಗಲಿದ್ದಾರೆ. ಅವರ ಶಿಕ್ಷಣ, ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಿ, ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದರೆ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಶ್ರೀಮತಿ ದುರ್ಗಮ್ಮ ಬಿಜವಾಡ,ಬಿಜೆಪಿ ಮುಖಂಡ ಶಶಿಕಾಂತ್ ಬಿಜವಾಡ,ಹಿರಿಯರಾದ ಮದನ ಪೈ, ರಾಜಶೇಖರ ಜೈನ, ಶಾಲೆಯ ಮುಖ್ಯಸ್ಥರಾದ ಎ ಎಸ್ ಕಟ್ಟಿ, ಜಿ ಎಸ್ ಅಕ್ಕಿ,ವಾಸಣ್ಣ ಸುಳ್ಳದ, ಸಿ ಜೆ ಜಾಬಿನ, ಅಶೋಕ್ ಮಿಷಿ, ಪ್ರವೀಣ್ ವಂಚಳ್ಳಿಮಠ, ಏನ್ ಸಿ ಪಾಟೀಲ, ಸಚಿನ್ ಕಾಟವೆ, ಶ್ರೀಧರ್ ಕಲ್ಬುರ್ಗಿ ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.