
ಕಲಬುರಗಿ: ಬಸವ ಜಯಂತಿ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಗೌರವಾಧ್ಯಕ್ಷ ದಶರಥ ಬಾಬು ವಂಟಿ ಅವರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಅಶೋಕ ಟಿ.ವೀರನಾಯಕ್, ರಾಜಕುಮಾರ ಕಪನೂರ, ಮಲ್ಲಪ್ಪ ಹೊಸಮನಿ, ದಿನೇಶ ದೊಡ್ಡಮನಿ, ದಿಗಂಬರ ಬೆಳಮಗಿ, ಸಂತೋಷ ಹಾದಿಮನಿ, ದೇವಿಂದ್ರ ಸಿನ್ನೂರ ಸೇರಿದಂತೆ ಮತ್ತಿತರರು ಇದ್ದರು.






















