
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.20: ನಗರದ ವೀರಶೈವ ಲಿಂಗಾಯತ ಸಮಾಜದ ಮುಖಂಡ ದರೂರು ಶಾಂತನಗೌಡ ನೇತೃತ್ವದ ತಂಡ ಬಸವ ಜಯಂತಿ ಅಂಗವಾಗಿ ಕೂಡಲ ಸಂಗಮದಿಂದ ಬಸವ ಜ್ಯೋತಿಯನ್ನು ನಗರಕ್ಕೆ ತಂದು ಬೆಳಗಿಸಿತು.
ನಿನ್ನೆ ಕೂಡಲ ಸಂಗಮದಿಂದ ಹೊರಟು ಇಂದು ನಗರದ ರಾಷ್ಟ್ರೀಯ ಬಸವ ದಳದ ಸಭಾಂಗಣಕ್ಕೆ ತಂದು. ಬಸವೇಶ್ವರನಿಗೆ ಪೂಜೆ ಸಲ್ಲಿಸಲಾಯ್ತು.
ಇಲ್ಲಿ ವೀರಶೈವ ಲಿಂಗಾಯತ ಸಮಾಜದ ಅನೇಕ ಮುಖಂಡರು ಜ್ಯೋತಿಯನ್ನು ಬರಮಾಡಿಕೊಂಡರು.
19 ನೇ ವರ್ಷದ ಬಸವ ಜ್ಯೋತಿಯನ್ನು ಬೈಕ್ ರ್ಯಾಲಿ ಮೂಲಕ ಗವಿಯಪ್ಪ ಸರ್ಕಲ್ ನಲ್ಲಿರುವ ಬಸವೇಶ್ವರ ಮೂರ್ತಿ ಬಳಿಗೆ ತಂದು ಜ್ಯೋತಿ ಆರಾಧನೆ ಮಾಡಲಾಯ್ತು.






















