Home ಜಿಲ್ಲೆ ಮೈಸೂರು ಸಾರಿಗೆ ಬಸ್ ಸಂಚಾರ ಸಮಯ ಬದಲಾವಣೆ ಗ್ರಾಮಸ್ಥರ ಆಗ್ರಹ

ಸಾರಿಗೆ ಬಸ್ ಸಂಚಾರ ಸಮಯ ಬದಲಾವಣೆ ಗ್ರಾಮಸ್ಥರ ಆಗ್ರಹ

ಸಂಜೆವಾಣಿ ವಾರ್ತೆ
ಹನೂರು.ಜೂ.10:
– ತಾಲೂಕಿನ ಪೆÇನ್ನಾಚಿ ಮರೂರು ಅಸ್ತೂರು ಗ್ರಾಮಸ್ಥರಿಂದ ಕೆಎಸ್‍ಆರ್ಟಿಸಿ ಸಮಯ ಬದಲಾವಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 9 -30 ಸಮಯ ಈ ಮೂರು ಗ್ರಾಮಗಳಿಗೂ ಸೂಕ್ತವಲ್ಲ ಸುಮಾರು 25 ವರ್ಷಗಳಿಂದ ಬೆಳಗ್ಗೆ 11-00 ಗಂಟೆಗೆ ಪೆÇನ್ನಾಚಿಗೆ ಬಂದು ಸಂಜೆ 3-30ಕ್ಕೆ ಇದ್ದ ಸಮಯ ಸೂಕ್ತವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಳಗ್ಗೆ 9-30ಕ್ಕೆ ಬರುವ ಶಿಕ್ಷಕರು ಹಾಗೂ ಬೇರೆ ಸರ್ಕಾರಿ ಅಧಿಕಾರಿಗಳು ಅವರಿಗೆ ಅನುಕೂಲ ಆಗುವಂತೆ ಕಾರು ಮತ್ತು ಬೈಕ್ಗಳಲ್ಲಿ ಬರುವಂತೆ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ


ಕೊಳ್ಳೇಗಾಲದಿಂದ ಕೆ ಎಸ್ ಆರ್ ಟಿ ಸಿ ಬಸ್ 8-00 ಗಂಟೆಗೆ ಬಿಟ್ಟು ಪೆÇನ್ನಾಚಿ. ಅಸ್ತೂರು ಮರೂರು. ಕೆಕ್ಕವಲ. ಗೇರಟ್ಟಿ. ಚಿಕ್ಕಮರೂರು. ಈಚಲ ದೊಡ್ಡಿ. ರಾಮೇಗೌಡನಹಳ್ಳಿ ಗ್ರಾಮಕ್ಕೆ 10-30 ಮೂವತ್ತಕ್ಕೆ ಕೆಎಸ್‍ಆರ್ಟಿಸಿ ಬಸ್ ಬರುತ್ತಿತ್ತು ಸಾರ್ವಜನಿಕರು ಶಿಕ್ಷಕರು ಹಾಗೂ ವಿಕಲಚೇತನರು ಹಿರಿಯರಿಗೆ ಅನುಕುಲವಾಗುತ್ತಿತ್ತು.
ಸಾರಿಗೆ ಇಲಾಖೆ ಅಧಿಕಾರಿಗಳು ಕೊಳ್ಳೇಗಾಲದಿಂದ ಕೆಎಸ್‍ಆರ್ಟಿಸಿ ಬಸ್ ಏಳು ಗಂಟೆಗೆ ಬಿಡುತ್ತಿರುವುದರಿಂದ ತುಂಬಾ ತೊಂದರೆ ಆಗಿದೆ ಆದರಿಂದ ಕೊಳ್ಳೇಗಾಲದಿಂದ 8-00 ಗಂಟೆಗೆ. ಕೆ.ಎಸ್. ಆರ್ ಟಿ. ಸಿ. ಬಸ್ಸನ್ನು ಬಿಟ್ಟು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು.


ಪೆÇನ್ನಾಚಿ ಗ್ರಾಮದಿಂದ ಸಾರಿಗೆ ಬಸ್ ಬೆಳಗ್ಗೆ ಆರು ಮೂವತ್ತಕ್ಕೆ ಬಿಟ್ಟು ಹನೂರು ಹಾಗೂ ಕೊಳ್ಳೇಗಾಲಕ್ಕೆ ಹೋಗುತ್ತಿದೆ ಶಾಲೆ ಮಕ್ಕಳು ಸಾರ್ವಜನಿಕರು ಅನುಕೂಲವಾಗಿದೆ ಪಕ್ಕದ ಕೌದಳ್ಳಿ ಗ್ರಾಮಕ್ಕೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮನೆಗೆ ಬೇಕಾದ ದವಸ ಧಾನ್ಯ ಹಾಗೂ ಇನ್ನಿತರ ಸಾಮಾನನ್ನು ತೆಗೆದುಕೊಂಡು ಪೆÇನ್ನಾಚಿ. ಮರೂರು ಅಸ್ತೂರು. ಹಾಗೂ ಇನ್ನಿತರ ಗ್ರಾಮದವರು ಕೊಳ್ಳೇಗಾಲದಿಂದ 8-00 ಗಂಟೆಗೆ ಕೆಎಸ್‍ಆರ್ಟಿಸಿ ಬಸ್ ಬರುತ್ತಿರುವುದರಿಂದ ತಮ್ಮ ಗ್ರಾಮಕ್ಕೆ ಹೋಗುವುದಕ್ಕೆ ಅನುಕೂಲವಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆ ಎಸ್ ಆರ್ ಟಿ ಸಿ ಸಾರಿಗೆ ಇಲಾಖೆ ಅಧಿಕಾರಿಗಳು ಮೊದಲಿನಂತೆ ಕೊಳ್ಳೇಗಾಲದ 8-00 ಗಂಟೆಗೆ ಸಾರಿಗೆ ಬಸ್ಸು ಬಿಡಬೇಕೆಂದು ಒತ್ತಾಯಿಸಿದ್ದಾರೆ.