Home Uncategorized ಬಳ್ಳಾರಿಯಲ್ಲಿ ಸಧ್ಯದಲ್ಲೇ ಒಮೆಗಾ ಕ್ಯಾನ್ಸರ್ ಆಸ್ಪತ್ರೆ: ನಿರ್ಣಿ

ಬಳ್ಳಾರಿಯಲ್ಲಿ ಸಧ್ಯದಲ್ಲೇ ಒಮೆಗಾ ಕ್ಯಾನ್ಸರ್ ಆಸ್ಪತ್ರೆ: ನಿರ್ಣಿ

oplus_2097152

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.09: ಈ ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುತ್ತದೆ. ಖಾಸಗೀ ಆಸ್ಪತ್ರೆಗಳಲ್ಲಿ ಇಲ್ಲ. ಕ್ಯಾನ್ಸ್ ರ್ ಮತ್ತು ಅದರ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಬೇಕೆಂದರೆ ಬೆಂಗಳೂರು ಮತ್ತು ಹೈದ್ರಾಬಾದ್ ಗೆ ಹೋಗಬೇಕಿದೆ. ಅದಕ್ಕಾಗಿ ಹೈದರಾಬಾದ್ ನ ಓಮೆಗಾ ಮಲ್ಟಿ ಸ್ಪೆಸಿಲಿಟಿ ಆಸ್ಪತ್ರೆಯಿಂದ ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಆರಂಭಿಸುವ ಕೊರಿತು ಆಸ್ಪತ್ರೆಯ ಡಾ.ಎಸ್. ಎಸ್. ನಿರ್ಣಿ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು. ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವ ಮಾತುಕತೆ ನಡೆದಿದೆ. ಸಧ್ಯದಲ್ಲೇ ಈ ಬಗ್ಗೆ ಅಂತಿಮಗೊಳ್ಳಲಿದೆ. ಆರಂಭದಲ್ಲಿ 30 ಹಾಸಿಗೆ ಆಸ್ಪತ್ರೆ ಆರಂಭಿಸುವ ಚಿಂತನೆ ಇದ್ದು ಬರುವ ಆರು ತಿಂಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆಂದು. ಹೇಳಿದರು.

ಹೆಣ್ಣುಮಕ್ಕಳಿಗೆ ಎಚ್ಪಿವಿ (ಗರ್ಭಕಂಠದ ಕ್ಯಾನ್ಸರ್ ತಡೆಯಲು) ನೀಡುವ ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ 14 ವರ್ಷದ ಬಾಲಕಿಯರಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಮನೆ ಮನೆಗೆ ಭೇಟಿ ನೀಡಿ  ಹಾಕಲಾಗುತ್ತದೆ. ಇದು ಉತ್ತಮವಾದ ಕಾರ್ಯ ಎಂದರು.

ಕ್ಯಾನ್ಸರ್ ರೋಗ ಲಕ್ಷಣಗಳ ಬಗ್ಗೆ ತಿಳಿಸಿ ಮಹಿಳೆಯರಲ್ಲಿ ಹೊಟ್ಟೆ, ಸ್ತನ ಕ್ಯಾನ್ಸರ್ ಹೆಚ್ಚು ಎಂದರು. ಇದಕ್ಕೆ ಕಾರಣ ನಮ್ಮ ಹಿಂದಿನ ಆಹಾರದಲ್ಲಿ ರಸಾಯನಿಕತೆ ಹೆಚ್ಚಾಗಿರುವುದು ಎಂದರು.