
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.03: ನಗರದ ಇಂದಿರಾ (ಸಂಗಂ) ಸರ್ಕಲ್ ನಲ್ಲಿ ಅರವಟ್ಟಿಗೆ ಇದೆ. ಆದರೆ ನೀರಿಲ್ಲ. ಬಿರು ಬೇಸಿಗೆಯಿಂದ ಬಾಯಾರಿ ಬರುವ ಜನತೆ ನೀರಿಲ್ಲದ್ದನ್ನು ಕಂಡು ನಿರಾಶೆಯಿಂದ ಹೋಗಬೇಕಿದೆ.
ನಗರದಲ್ಲಿ ಬಿಸಿಲಿನ ತಾಪ ಹೆಚ್ಚಿದೆಂದು ಮಹಾನಗರ ಪಾಲಿಕೆಯವರು ಸಾವಿರಾರು ರೂ ವೆಚ್ಚ ಮಾಡಿ, ನಗರದ ಹಲವಡೆ ಇಂತಹ ಅರವಟ್ಟಿಗೆಗಳನ್ನು ತೆರೆದು ಎರೆಡು ನೀರಿನ ಗಡಿಗೆ ಇಟ್ಟು. ಅವುಗಳಿಗೆ ಗೋಣಿ ತಟ್ಟು ಸುತ್ತಿ ನೀರುಹಾಕಿ ಜನತೆ ತಂಪಾದ ನೀರು ಕುಡಿಯುವಂತೆ ಮಾಡಿದ್ದಾರೆ. ದಿನ ನಿತ್ಯ ನೀರು ಹಾಕಲಾಗುತ್ತಿತ್ತು.
ಆದರೆ ಇಲ್ಲಿ ಕಳೆದ ಎರೆಡು ದಿನದಿಂದ ನೀರು ಹಾಕಿಲ್ಲ. ನೀರು ಬಯಸಿ ಬರುವ ಜನತೆಗೆ ನಿರಾಶೆ ಇದೆ. ಇನ್ನಾದರೂ ಸಂಬಂಧಿಸಿದ ಪಾಲಿಕೆಯ ಅಧಿಕಾರುಗಳು ದಿನನಿತ್ಯ ಇಲ್ಲಿ ನೀರು ಹಾಕುವ ವ್ಯವಸ್ಥೆ ಆಗಬೇಕಿದೆಂದು ಜನತೆ ಆಗ್ರಹಿಸಿದ್ದಾರೆ.






















