ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ನಿರುದ್ಯೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳ, ಆರೋಗ್ಯ ಮೇಳ ಸೇರಿ ನಾನಾ ಸೇವಾ ಕಾರ್ಯಗಳನ್ನು ಜು.24 ಶಾಸಕ ಕೆ.ಹರೀಶ್ ಗೌಡರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲು ಒಮ್ಮತದಿಂದ ತೀರ್ಮಾನಿಸಲಾಯಿತು.
ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಸಮಿತಿ ಹಾಗೂ ಕೆ.ಹರೀಶ್ ಗೌಡರ ಅಭಿಮಾನಿಗಳ ಸಮಿತಿ ಸಂಯುಕ್ತಾಶ್ರಯದಲ್ಲಿ ಪಡುವಾರಹಳ್ಳಿಯ ಎಚ್.ಚನ್ಮಯ್ಯ ಸಭಾಮಂಟಪದಲ್ಲಿ ಆಯೋಜಿಸಿದ್ದ ಶಾಸಕ ಕೆ.ಹರೀಶ್ ಗೌಡರ ಹುಟ್ಟುಹಬ್ಬದ ಪೂರ್ವಭಾವಿ ಸಭೆಯಲ್ಲಿ ಎಲ್ಲರೂ ಮೇಲಿನಂತೆ ತೀರ್ಮಾನಿಸಿದರು.ಈ ವೇಳೆ ಚಾಮರಾಜ ಕ್ಷೇತ್ರದ ಇಂದಿರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲಿನ ರವಿ ಮಾತನಾಡಿ, ಜು.24ರಂದು ಶಾಸಕರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜ ಕಾಂಗ್ರೆಸ್ ಸಮಿತಿ ಹಾಗೂ ಹರೀಶ್ ಗೌಡ ಅಭಿಮಾನಿಗಳ ಸಮಿತಿ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ, ಆರೋಗ್ಯ ಮೇಳ, 500 ಮಂದಿಗೆ ಹೊಲಿಗೆಯಂತ್ರ ವಿತರಣೆ, 19 ವಾರ್ಡಿನ ಬಡ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ, ರಕ್ತದಾನ ಶಿಬಿರ ಸೇರಿ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ದೊಡ್ಡ ಮಟ್ಟದ ಕಾರ್ಯಕ್ರಮ ಆಗಿರುವ ಹಿನ್ನೆಲೆಯಲ್ಲಿ ಸ್ವಾಗತ ಸಮಿತಿ, ಆರೋಗ್ಯ ಸಮಿತಿ ಸೇರಿ ಮೊದಲಾದ ಸಮಿರಿಗಳನ್ನು ರಚನೆ ಮಾಡಲಾಗುತ್ತಿದೆ. 19 ವಾರ್ಡ್ ಸೇರಿ ನರಸಿಂಹ ರಾಜ ಕ್ಷೇತ್ರವನ್ನು ಒಳಗೊಂಡಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಜೆಕೆ ಗ್ರೌಂಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಐಟಿ- ಬಿಟಿ, ಕಾರ್ಖಾನೆಗಳು ಸೇರಿ ಅನೇಕ ಕಂಪನಿಗಳನ್ನು ಸಂಪರ್ಕಿಸಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ಬಿಇ, ಎಂಬಿಎ ಪದವಿ ಪಡೆದ ಅನೇಕರು ಉದ್ಯೋಗಕ್ಕಾಗಿ ಶಾಸಕರ ಕೋರುತ್ತಿದ್ದು, ಇದನ್ನು ನಿವಾರಿಸಲು ಉದ್ಯೋಗ ಮೇಳ ಸಹಕಾರಿಯಾಗಲಿದೆ ಎಂದರು.
ಮಾಜಿ ಮಹಾಪೌರರಾದ ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯರಾದ ಟಿ.ಬಿ.ಚಿಕ್ಕಣ್ಣ, ಡಿ.ನಾಗಭೂಷಣ, ಎಂ.ಡಿ.ನಾಗರಾಜ್, ನಗರ ಕಾಂಗ್ರೆಸ್ ಅಧ್ಯಕ್ಷ
ಆರ್.ಮೂರ್ತಿ, ಹಿಂದುಳಿದ ವರ್ಗಗಳ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಆರ್.ನಾಗೇಶ್,ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಕರ್ನಾಟಕ ರಾಜ್ಯ ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ, ದಿ ಮೈಸೂರು ಕೋ ಅಪರೇಟಿವ್ ಅಧ್ಯಕ್ಷ ಎಂ.ಯೋಗೇಶ್, ನಿರ್ದೇಶಕ ಒಂಟಿಕೊಪ್ಪಲು ಗುರುರಾಜ್, ಆಶೋಕ, ಸಿ.ರಾಜಣ್ಣ, ಮುಖಂಡರಾದ ಕೆ.ಸಿ.ಮಹೇಶ್ ಗೌಡ, 22ನೇ ವಾರ್ಡಿನ ಅಧ್ಯಕ್ಷ ಕುಮಾರಗೌಡ, ಯುವಕಾಂಗ್ರೆಸ್ ಅಧ್ಯಕ್ಷ ಕಿರಣ್, ಮಹಿಳಾ ಅಧ್ಯಕ್ಷೆ ಭಾಗ್ಯಮ್ಮ, ಹರೀಶ್ ಗೌಡ ಇನ್ನಿತರರು ಉಪಸ್ಥಿತರಿದ್ದರು.