
ಖ್ಯಾತ ನಟ ನಾನಾ ಪಾಟೇಕರ್ ಅವರ ನಿಧನದ ಬಳಿಕ ಅವರ ಕುಟುಂಬದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಎಂದು ಅವರ ಮಗ ಮಲ್ಹಾರ್ ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ 8 ರಂದು ಗೋವಾದಲ್ಲಿ ಹೃದಯಾಘಾತದಿಂದ ನಾನಾ ಪಾಟೇಕರ್ ಅವರು ತಮ್ಮ 75 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರ ಮರಣದ ನಂತರ, ಅವರ ಕೊನೆಯ ದಿನಗಳು ಒಂಟಿತನದಿಂದ ಕೂಡಿದ್ದವು ಹಾಗೂ ಪತ್ನಿಯೊಂದಿಗೆ ಬಿರುಕು ಮೂಡಿತ್ತು ಎಂಬ ವಾದಗಳು ಕೇಳಿಬಂದಿದ್ದವು. ಈ ಕುರಿತು ಮಲ್ಹಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆÇೀಷಕರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಅವರ ನಡುವೆ ಉತ್ತಮ ಮತ್ತು ಭಾವನಾತ್ಮಕ ಬಾಂಧವ್ಯವಿತ್ತು ಎಂದು ಮಲ್ಹಾರ್ ತಿಳಿಸಿದ್ದಾರೆ. ತಾವು ಇನ್ಸ್ಟಾಗ್ರಾಮ್ನಲ್ಲಿ ಕುಟುಂಬದ ಫೆÇೀಟೋಗಳನ್ನು ಹಂಚಿಕೊಳ್ಳುವುದಿಲ್ಲ ಎಂದ ಮಾತ್ರಕ್ಕೆ ಸಂಬಂಧಗಳಲ್ಲಿ ಬಿರುಕಿದೆ ಎಂದರ್ಥವಲ್ಲ ಎಂದಿದ್ದಾರೆ. ಸುಮಾರು 38 ರಿಂದ 39 ವರ್ಷಗಳ ಕಾಲ ಒಟ್ಟಿಗೆ ಇದ್ದ ಇಬ್ಬರ ನಡುವೆ ಯಾವುದೇ ವೈಮನಸ್ಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾನಾ ಪಾಟೇಕರ್ ಎಂದಿಗೂ ಒಂಟಿಯಾಗಿರಲಿಲ್ಲ ಹಾಗೂ ಅನಾರೋಗ್ಯದಿಂದಲೂ ಬಳಲುತ್ತಿರಲಿಲ್ಲ ಎಂದು ಮಲ್ಹಾರ್ ನೆನಪಿಸಿಕೊಂಡಿದ್ದಾರೆ. ಅವರು ಪ್ರತಿದಿನ ಜಿಮ್ನಲ್ಲಿ ಎರಡೂವರೆ ಗಂಟೆಗಳ ಕಾಲ ಕಠಿಣ ವ್ಯಾಯಾಮ ಮಾಡುತ್ತಿದ್ದರು ಮತ್ತು ಇಂದಿನ ಯುವಕರಿಗೂ ಸವಾಲಾಗುವಂತಹ ಅತ್ಯುತ್ತಮ ಫಿಟ್ನೆಸ್ ಮಟ್ಟವನ್ನು ಹೊಂದಿದ್ದರು. ಕುಟುಂಬದ ಸದಸ್ಯರು ಸದಾ ಅವರೊಂದಿಗೆ ಇರುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಗೋವಾದಲ್ಲಿ ನಾನಾ ಪಾಟೇಕರ್ ಅವರೊಂದಿಗೆ ಅವರ ಸೋದರಸಂಬಂಧಿಗಳಾದ ಪ್ರಸಾದ್ ಮತ್ತು ಅಮಯ್ ಇದ್ದರು ಎಂದು ಮಲ್ಹರ್ ಮಾಹಿತಿ ನೀಡಿದ್ದಾರೆ. ಪ್ರಸಾದ್ ಅವರ ಎಲ್ಲಾ ಸಭೆಗಳನ್ನು ನಿರ್ವಹಿಸುತ್ತಿದ್ದರೆ, ನಾನಾ ಪಾಟೇಕರ್ ಅವರು ಮಾಧುರಿ ದೀಕ್ಷಿತ್ ಅವರೊಂದಿಗೆ ಕೆಬಿಸಿ ಮರಾಠಿ ಚಿತ್ರೀಕರಣದಲ್ಲಿ ಭಾಗವಹಿಸಬೇಕಿದ್ದ ಕಾರಣ ಪ್ರಸಾದ್ ಅವರನ್ನು ಮುಂಬೈಗೆ ಕಳುಹಿಸಲಾಗಿತ್ತು. ಆ ಸಮಯದಲ್ಲಿ ಮತ್ತೊಬ್ಬ ಸೋದರಸಂಬಂಧಿ ಅಮಯ್ ಅವರೊಂದಿಗೆ ಇದ್ದರು. ನಾನಾ ಪಾಟೇಕರ್ ವಿಶ್ರಾಂತಿಗಾಗಿ ತಮ್ಮ ಮೇಲಿನ ಮಹಡಿಯ ಕೋಣೆಗೆ ತೆರಳಿದಾಗ ಅಮಯ್ ತಮ್ಮ ಮನೆಗೆ ವಾಪಸಾಗಿದ್ದರು. ಆದರೆ ಅಸ್ವಸ್ಥತೆ ಉಂಟಾದಾಗ ನಾನಾ ಪಾಟೇಕರ್ ಮೊದಲು ಅಮಯ್ಗೆ ಸಂದೇಶ ಕಳುಹಿಸಿ ನಂತರ ಕರೆ ಮಾಡಿದ್ದರು. ಆದರೆ ಅಮಯ್ ಬರುವಷ್ಟರಲ್ಲಿ ಕಾಲಾವಕಾಶ ಮೀರಿತ್ತು.
ತಮ್ಮ ತಂದೆಯ ಅನಿರೀಕ್ಷಿತ ಅಗಲಿಕೆಯ ದುಃಖವನ್ನು ಹಂಚಿಕೊಂಡಿರುವ ಮಲ್ಹಾರ್, ಅಂದು ಬೆಳಿಗ್ಗೆ 5 ಗಂಟೆಗೆ ತಾಯಿ ತಮಗೆ ಕರೆ ಮಾಡಿ ಮರಣದ ಸುದ್ದಿ ತಿಳಿಸಿದರು ಎಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಪುಣೆಯಲ್ಲಿದ್ದ ತಮಗೆ ಆ ಸುದ್ದಿ ಕೇಳಿ ಇಡೀ ಪ್ರಪಂಚವೇ ನಿಂತುಹೋದಂತಹ ಅನುಭವವಾಯಿತು ಎಂದು ಮಲ್ಹಾರ್ ಭಾವುಕರಾಗಿ ನುಡಿದಿದ್ದಾರೆ.






















