
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.03 :ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವಿಶೇಷ ಘಟಕ ಯೋಜನೆಯಡಿ ನಿನ್ನೆ ಸಂಜೆ ಹಲುಕುಂದಿ ಗ್ರಾಮದ ಶ್ರೀ ಈಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಮೀಣ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಗಾದಿಲಿಂಗಪ್ಪ ಊರಿನ ಮುಖಂಡರು, ಹೆಚ್ ತಿಮ್ಮನಗೌಡ ಉದ್ಯಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡೆ, ಎಚ್.ಆರ್ ಮಲ್ಲನಗೌಡ ಮತ್ತು ಹಲಕುಂದಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು, ಹೆಚ್.ಆರ್ ಮಲ್ಲಿಕಾರ್ಜುನ ಗೌಡ. ಊರಿನ ಮುಖಂಡರುಗಳಾದ ಭೀಮರೆಡ್ಡಿ, ಚಂದ್ರಶೇಖರ, ಕೇಶವ, ಪಿ. ಗವಿಸಿದ್ದಪ್ಪ, ಬಿ ಎಂ ಪಾಟೇಲ್, ಪಿ ಸಿದ್ದಪ್ಪ, ಎಲ್ಲಪ್ಪ ನಾಯಕ, ಟಿ. ಚಂದ್ರ, ಆಲಂಬಾಷ, ಮತ್ತು ಊರಿನ ಹಿರಿಯ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎರಗುಡಿ, ಎಚ್.ಜಿ ಸುಂಕಪ್ಪ ತಂಡದಿಂದ ಜನಪದ ಸಂಗೀತ, ಸಿರುಗುಪ್ಪದ, ದಳವಾಯಿ ಅಂಬಣ್ಣ ತಂಡದಿಂದ ಸುಗಮ ಸಂಗೀತ, ರಂಗಗೀತೆ ಬಳ್ಳಾರಿಯ ಅನ್ನಪೂರ್ಣ ತಂಡ, ಹೆಚ್. ಹನುಮಂತಪ್ಪ ತಂಡದಿಂದ ದ್ರೌಪದಿ ವಸ್ತ್ರಾಪರಣ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಎಂದು ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಅಧ್ಯಕ್ಷರಾದ ಸುಬ್ಬಣ್ಣ ತಿಳಿಸಿದ್ದಾರೆ.






















