Home ಜಿಲ್ಲೆ ಸಾಮೂಹಿಕ ವಿವಾಹ ಆಯೋಜಕರಿಗೆ ತರಬೇತಿ

ಸಾಮೂಹಿಕ ವಿವಾಹ ಆಯೋಜಕರಿಗೆ ತರಬೇತಿ

(ಸಂಜೆವಾಣಿ ವಾರ್ತೆ)

ಬಳ್ಳಾರಿ. ಮೇ.03: ಬರೀಡ್ಸ್ ನಂಸ್ಥೆಯಿಂದ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ, ಅಂಗ ತಾರತಮ್ಯ ತಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಿನ್ನೆ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಬಾಲ್ಯ ವಿವಾಹ ನಿಷೇಧ ಕಾಯ್ದೆ-2008 ಹಾಗೂ ಸಾಮೂಹಿಕ ವಿವಾಹ ಆಯೋಜಕರ ಜವಾಬ್ದಾರಿ ಕರ್ತವ್ಯಗಳ ಬಗ್ಗೆ ಒಂದು ದಿನದ ತರಬೇತಿ ತರಬೇತಿ ಇದಾಗಿತ್ತು.

ಸಾಮೂಹಿಕ ವಿವಾಹ ಆಯೋಜಕರು, ಪ್ರಿಟಿಂಗ್ ಪ್ರಸ್ ಮಾಲೀಕರು, ದೇವಸ್ಥಾನ ಸಮಿತಿ ಮುಖ್ಯಸ್ಥರು ಹಾಗೂ ಮೌಲ್ವಿಗಳು ತರಬೇತಿಗೆ ಹಾಜರಾಗಿದ್ದರು.