
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ,4- ಬಳ್ಳಾರಿ ನಗರದ ರಾಷ್ಟ್ರೀಯ ಬಸವದಳದ ಅನುಭವ ಮಂಟಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಇತಿಹಾಸ ಅಕಾಡೆಮಿ ಟಿಹೆಚ್ಎಮ್ ಸಾಂಸ್ಕೃತಿಕ ಕಲಾ ಟ್ರಸ್ಟ್ ರಾಷ್ಟ್ರೀಯ ಬಸವಣ್ಣನ ಸಂಯುಕ್ತವಾಗಿ ಹಮ್ಮಿಕೊಂಡ ಟಿ ಹೆಚ್ ಎಂ ಶಿವರುದ್ರ ಶಾಸ್ತ್ರಿ ಟಿಹೆಚ್ಎಮ್ ಸದಾಶಿವಯ್ಯ ಹಾಗೂ ಟಿ ಹೆಚ್ ಎಂ ಶಿವಯ್ಯ ದತ್ತಿ ಉಪನ್ಯಾಸ ಪರಂಪರೆ ಉಳಿಸಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿದ್ವಾನ್ ಉತ್ತಂಗಿ ತೋಟಪ್ಪ ಗವಾಯಿಗಳಿಗೆ ವಚನಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ನಾಗರಾಜ್ ರವರು ಉದ್ಘಾಟಿಸಿ ಮಾತನಾಡಿ, ವಿಶ್ವಗುರು ಬಸವಣ್ಣನವರನ್ನು ಸಂಸ್ಕೃತಿಕ ನಾಯಕ ಎಂದು ಸರ್ಕಾರವು ಘೋಷಣೆ ಮಾಡಿದೆ ಟ ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಹಾಕುವುದನ್ನು ಕಡ್ಡಾಯ ಮಾಡಿದೆ ಏಕೆಂದರೆ ಬಸವಣ್ಣನವರು ನಮಗೆ ಸಾಂಸ್ಕೃತಿಕ ನಾಯಕವಾಗಿ ಮಾತ್ರ ಉಳಿದಿಲ್ಲ ಸಾಮಾಜಿಕ ವಿಮೋಚನೆಯ ನಾಯಕನಾಗಿ ಅರಿವಿನ ಗುರುವಾಗಿ ಕಾಣುತ್ತಾರೆ ಅಂಜದಿರು ಅಳುಕದಿರು ಕೊಂದದಿರು ಖುಷಿಯದಿರು ಏನೋ ಎಂತೋ ಎಂದು ಚಿಂತಿಸದಿರು ನಿನ್ನ ನಾನೇನು ಬೇಡ ಕೂಡಲಸಂಗಮದೇವ ಸರ್ಕಾರ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಕಿರು ಹೊತ್ತಿಗೆಯನ್ನು ತಂದಿದೆ ಇಂದಿನ ಪ್ರಜಾಪ್ರಭುತ್ವದ ಹಾದಿಗೆ ಮಾದರಿಯಾದವರು ಸಮಾಜದ ಎಲ್ಲ ವರ್ಗಗಳ ಕಟ್ಟಕಡೆಯ ಜನರನ್ನು ಒಗ್ಗೂಡಿಸಿ ಸಮಾನತೆಯ ತತ್ವ ಪಸರಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಬಿ ನಾಗರಾಜ್ ರವರು ತಿಳಿಸಿದರು ದತ್ತಿ ಉಪನ್ಯಾಸ ನೀಡಿದ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಎಚ್ ಎಂ ಬಸವರಾಜ್ ರವರು ವಚನ ಭಾಷಾಂತರ ಇತಿಹಾಸದ ಮೇಲೆ ಉಪನ್ಯಾಸ ನೀಡಿದರು ಬಸವಣ್ಣನವರ ವಚನಗಳು 27 ಭಾಷೆಗಳಲ್ಲಿ 27 ವಿದ್ವಾಂಸರಿಂದ ರಚಿಸಲ್ಪಟ್ಟು 27 ಪುಸ್ತಕಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಡಾಕ್ಟರ್ ಎಂ ಎಂ ಕಲಬುರ್ಗಿಯವರು ಬಿಡುಗಡೆ ಮಾಡಿಸಿದರು ಅದರಲ್ಲಿ ಟಿಎಚ್ಎಂ ಸದಾಶಿವಯ್ಯನವರು 75 ವಚನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ ಹಂಚಿ ಹರಿದು ಹೋದ ತಾಳೆಗರಿಗಳನ್ನು ಹಸ್ತಪ್ರತಿಗಳನ್ನು ಹಳಕಟ್ಟಿ ಅವರು ಕಾಪಾಡಿ ಮೊದಲ ಮುದ್ರಣ ಮಾಡಿದರು ಬರೀ ವೀರಶೈವರಲ್ಲದೆ ಕ್ರಿಶ್ಚಿಯನ್ ಬ್ರಾಹ್ಮಣರು ಮುಸ್ಲಿಮರು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸಿದ್ದಾರೆ ವಚನ ಸಾಹಿತ್ಯದ ಅನುವಾದಕ್ಕೆ ಇತಿಹಾಸವಿದೆ 15ನೇ ಶತಮಾನದ ಮಗ್ಗೆಯ ಮಾಯಿ ದೇವರು ಅಲ್ಲಮಪ್ರಭುವಿನ ಶಟ್ಸ್ ತಳವಚನಗಳನ್ನು ಪ್ರಭು ಗೀತಾ ಹೆಸರಿನಲ್ಲಿ ಸಂಸ್ಕೃತಕ್ಕೆ ಅನುವಾದಿಸಿದ್ದಾರೆ ಬಸವಣ್ಣನವರ ವಚನಗಳು ಪಾಲ್ಗುರಿಕೆ ಸೋಮನಾಥನ ತೆಲುಗು ಬಸವನಗುಮು ಎಂಬುವುದರಲ್ಲಿ ಆಗಾಗ ಭಾವನಾರೋಪದಲ್ಲಿ ಕಾಣಿಸಿಕೊಂಡಿದೆ ಈ ರೀತಿಯಾಗಿ ಅನುವಾದ ಕಾರ್ಯ ಯಾವ ರೀತಿಯಲ್ಲಿ ಬೆಳವಣಿಗೆ ಹೊಂದಿದೆ ಎಂಬುದನ್ನು ಗುರುತಿಸಬಹುದು ಮೊಟ್ಟಮೊದಲ ಅನುವಾದ ಕಾರ್ಯ ಅದರ ಕೀರ್ತಿ ಈ ಪಿ ರೈಸ್ ರವರಿಗೆ ಸಲ್ಲುತ್ತದೆ ವಿದೇಶಿ ವಿದ್ವಾಂಸರಾದ ಜಿಎಸ್ ಪಾರ್ಕರ್ ಅವರ ಸಹಾಯದಿಂದ 1915ರಲ್ಲಿ 139 ವಚನಗಳನ್ನು ಅನುವಾಯಿಸಿದರು ಅದನ್ನು ಅಂದಿನ ಪ್ರಮುಖ ಇಂಗ್ಲೀಷ್ ಪತ್ರಿಕೆಯಾದ ಇಂಡಿಯನ್ ಆಂಟಿ ಕೊರಿಯೆ ವಾಲ್ಯೂಮ್ ಟು 1922 ರಲ್ಲಿ ಪ್ರಕಟಚಿದ್ದಾರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸೇಯಿಂಗ್ಸ್ ಆಫ್ ಬಸವಣ್ಣ ಎಂಬ ಕೃತಿಯನ್ನು 1934ರಲ್ಲಿ ಪ್ರಕಟಿಸಿದರು ವಚನ ಭಾಷಾಂತರ ಇತಿಹಾಸವು ಇತಿಹಾಸ ದರ್ಶನ ಸಂಪುಟದಲ್ಲಿ ಪ್ರಕಟವಾಗಿದೆ ಎಂದು ಟಿ ಎಚ್ ಎಂ ಬಸವರಾಜ್ ರವರು ತಿಳಿಸಿದರು ಸಮಯದ ಭಾವದಿಂದ ನಾನು ಸಾರಾಂಶವನ್ನು ಮಾತ್ರ ಹೇಳಿದ್ದೇನೆ ಬಸವಣ್ಣನವರ ಹುಟ್ಟಿದ ಊರಾದ ಇಂಗಳೇಶ್ವರ ಊರಿ ನಾ ಡಾಕ್ಟರ್ ರಾಜಶೇಖರ್ ನಾಗೂರ್ ಸಾಹಿತಿಗಳು ಹಾಗೂ ಮುಖ್ಯ ಪಶುವೈದ್ಯಾಧಿಕಾರಿಗಳು ಬಳ್ಳಾರಿ ಇವರು ಅಧ್ಯಕ್ಷತೆ ವಹಿಸಿದ್ದರು ಏನೇ ಬಸಪ್ಪ ನಿರುತ್ತಾ ಇಂಜಿನಿಯರ್ ಬಸವಣ್ಣನ ಫೋಟೋವನ್ನು ಅನಾವರಣಗೊಳಿಸಿದರು ದತ್ತಿದ್ದಾನೆ ಹೊಸಪೇಟೆಯ ವಿಶ್ರಾಂತ ಇ ಈ ಪಿಡಬಡಿ ಟಿ ಹೆಚ್ ಎಂ ಚನ್ನವೀರ ಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು ವೇದಿಕೆ ಮೇಲೆ ಚೆನ್ನವೀರ ಚಿತ್ರ ಕಲಾವಿದರು ಎಸ್ ಸುರೇಖಾ ಮಲ್ಲನಗೌಡ ಮಹಾನಗರ ಪಾಲಿಕೆ ಸದಸ್ಯರು ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷರಾದ ಟಿ ಆರ್ ನಾಗರಾಜ್ ಉಪಸ್ಥಿತರಿದ್ದರು ನಂತರ ವಿದ್ವಾಂ ತೋಟಪ್ಪ ಉತ್ತಂಗಿ ಗವಾಯಿಗಳವರ ತಂಡದವರಾಗ ಅಭಿಷೇಕ್ ತಬಲಾ ಶರಣ್ ರಿದಮ್ ಪ್ಯಾಡ್ ಆದರ್ಶ ಶ್ರೀಮತಿ ರೇಖಾ ವಿಜಯಕುಮಾರ್ ಶ್ರೀಮತಿ ಜ್ಯೋತಿ ಗಿರೀಶ್ ಹಿನ್ನೆಲೆ ಗಾಯಕರಿಂದ ಶರಣರ ವಚನಗಳು ಗಾಯನ ಮೂಲಕ ಮೂಡಿ ಬಂದವು ಸತತ ಮೂರು ಗಂಟೆಗಳ ಕಾಲ ತೋಟಪ್ಪನವರ ಸಿರಿಕಂಠದಲ್ಲಿ ನೋಡಿ ಬಂದ ವಚನಗಳನ್ನು ಕೇಳಲು ಜನರು ಕಿಕ್ಕೇರಿದು ತುಂಬಿದ್ದರು ರಾಷ್ಟ್ರೀಯ ಬಸವದಾಳದ ಪ್ರಧಾನ ಕಾರ್ಯದರ್ಶಿ ಕೆ ವಿ ರವಿಶಂಕರ್ ಎಲ್ಲರನ್ನೂ ಸ್ವಾಗತಿಸಿದರು ಟಿ ಹೆಚ್ ಎಂ ಬಸವರಾಜ ನಿರೂಪಿಸಿದರು ಕೊನೆಯಲ್ಲಿ ಡಾಕ್ಟರ್ ನಿಷ್ಟಿ ರುದ್ರಪ್ಪನವರು ವಂದಿಸಿದರು ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆಯಾಯಿತು

























