Home ಜಿಲ್ಲೆ ರಾಜ್ಯದ ಅನೇಕ ಗಣ್ಯರಿಗೆ “ಹುನುಕುಂಟೆ ಶ್ರೀ” ಪ್ರಶಸ್ತಿ ತೊಗಲುಗೊಂಬೆ ಮನುಷ್ಯ ಜೀವನದ ಒತ್ತಡಗಳನ್ನು ನಿವಾರಿಸುತ್ತದೆ

ರಾಜ್ಯದ ಅನೇಕ ಗಣ್ಯರಿಗೆ “ಹುನುಕುಂಟೆ ಶ್ರೀ” ಪ್ರಶಸ್ತಿ ತೊಗಲುಗೊಂಬೆ ಮನುಷ್ಯ ಜೀವನದ ಒತ್ತಡಗಳನ್ನು ನಿವಾರಿಸುತ್ತದೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ ಮಾ.30: ತೊಗಲುಗೊಂಬೆ ಕಲಾವಿದ ದಿ.ಶ್ರೀ ಹುಲೆಪ್ಪನವರ ಸ್ಮರಣಾರ್ಥ ರಾಜ್ಯಮಟ್ಟದ “ಹುಲಿಕುಂಟೆ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ನಿನ್ನೆ ಸಂಜೆ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿತು.

ಸಮಾರಂಭವನ್ನು ಉದ್ಘಾಟಿಸಿದ ಭಾರತೀಯ ವೈದ್ಯಕೀಯ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ ಮಧುಸೂಧನ ಕಾರಿಗನೂರು, ತೊಗಲುಗೊಂಬೆ ಮನುಷ್ಯ ಜೀವನದ ಒತ್ತಡಗಳನ್ನ ನಿವಾರಿಸುತ್ತದೆ ಎಂದರು.

ದೇಶ ವಿದೇಶದಲ್ಲಿ ತೊಗಲುಗೊಂಬೆ ನಾಟಕ ಪ್ರದರ್ಶನಕ್ಕೆ ತುಂಬಾ ಬೇಡಿಕೆ ಇದೆ ಎಲೆ ಮರ ಕಾಯಿ ಅಂತಿರುವ ಕಲಾವಿದರನ್ನು ಹುಡುಕಿ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಷಯ ಎಂದು ಅಧ್ಯಕ್ಷತೆಯನ್ನು ವಹಿಸಿದ್ದ ಜೆ. ಟಿ.ಫೌಂಡೇಶನ್ ಅಧ್ಯಕ್ಷ ತಿಮ್ಮಪ್ಪ ಜೋಳದ ರಾಶಿ ಹೇಳಿದರು. 

ಪ್ರಶಸ್ತಿಯನ್ನು ಸ್ವೀಕರಿಸಿದ ಎಲ್ಲಾ ಗಣ್ಯರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ತೊಗಲುಗೊಂಬೆ ಆಟ ರಾಜರ ಆಶ್ರಯಕ್ಕಿಂತ ಜನರ ಆಶ್ರಯದಲ್ಲಿ ಬೆಳೆಯಿತು. ಬಳ್ಳಾರಿಯಲ್ಲಿ ನುರಿತ ಕಲಾವಿದರನ್ನು ಗುರುತಿಸುವ ಕೆಲಸ ಈ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂಡೂರಿನ ಪ್ರಭುದೇವರ ಮಠದ  ಪ್ರಭು ಮಹಾಸ್ವಾಮಿ ಹೇಳಿದರು.

ಮೇಧಾ ಕಾಲೇಜಿ ಮುಖ್ಯಸ್ಥ ಡಾ. ರಾಮ್ ಕಿರಣ್ , ನೃತ್ಯ ಜಿಲಾನಿ ಭಾಷಾ, ದೊಡ್ಡಬಸಪ್ಪ ಯಾಟಿ  ಉಪಸ್ಥಿತರಿದ್ದರು.  “ಹುಲಿಕುಂಟೆ ಶ್ರೀ” ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ 27 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಂತರ ಸುಗಮ ಸಂಗೀತ ಮಲ್ಲಿಕಾರ್ಜುನ ತೂರನೂರು, ಸಮೂಹ ನೃತ್ಯವನ್ನು ಎಸ್ ಕೆ ಆರ್ ಜಿಲಾನಿ ಭಾಷಾ ಮತ್ತು ತಂಡ. ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡದವರು ರೇಣುಕಾ ಮಹಾತ್ಮೆ ಎನ್ನುವ ಬಯಲಾಟವನ್ನು ಪ್ರದರ್ಶಿಸಿದರು

ಸಂಸ್ಥೆಯ ಅಧ್ಯಕ್ಷರ ಹೊನ್ನೂರಸ್ವಾಮ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾರ್ಥನೆ ಜಡೆೆಶ ಎಮ್ಮಿಗನೂರು ವಂದನಾರ್ಪಣೆ, ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಿದೇವಿ, ಕಾರ್ಯಕ್ರಮದ ನಿರೂಪಣೆ ಬಸವರಾಜ ಅಮಾತಿ ಮತ್ತು ವಿಷ್ಣು ಹಡಪದ ನೆರವೇರಿಸಿಕೊಟ್ಟರು