Home ಜಿಲ್ಲೆ ಬೆಂಗಳೂರು ಮಕ್ಕಳ ಸಾಮಾಜಿಕ, ಭಾವನಾತ್ಮಕ ಕಲಿಕೆಗೆ ’ದಿ ನೆಸ್ಟ್’ ಸ್ಟುಡಿಯೋ ಉದ್ಘಾಟನೆ

ಮಕ್ಕಳ ಸಾಮಾಜಿಕ, ಭಾವನಾತ್ಮಕ ಕಲಿಕೆಗೆ ’ದಿ ನೆಸ್ಟ್’ ಸ್ಟುಡಿಯೋ ಉದ್ಘಾಟನೆ

ಬೆಂಗಳೂರು,ಜು೧೩: ಮಕ್ಕಳ ಕೇವಲ ಶೈಕ್ಷಣಿಕ ಸಾಧನೆಯಷ್ಟೇ ಅಲ್ಲದೆ, ಅವರು ಜಾಗೃತವಾಗಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ವೇಟಾಸ್ ಎಜುಕೇಷನ್ ಫೌಂಡೇಶನ್ ಜುಲೈ ೧೩ರಂದು ಬೆಂಗಳೂರಿನ ಜೆ.ಪಿ.ನಗರದ ಮೊದಲ ಹಂತದಲ್ಲಿ ತನ್ನ ಮೊದಲ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕಾ ಸ್ಟುಡಿಯೋ ಆದ ’ದಿ ನೆಸ್ಟ್’ ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ.


ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಕರು, ಸಂಶೋಧಕರು, ಪೋಷಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು. ಕ್ರೈಸ್ಟ್ ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವರ್ಜೀನಿಯಾ ವಿಶ್ವವಿದ್ಯಾಲಯದೊಂದಿಗಿನ ಜಂಟಿ ಯೋಜನೆಯಡಿ ಮಕ್ಕಳಿಗಾಗಿ ವಿವಿಧ ಕಥೆಗಳು, ಆಟಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಜೊತೆಗೆ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಕುರಿತು ವಯಸ್ಕರಿಗಾಗಿ ವಿಶೇಷ ಚಿಂತನಾತ್ಮಕ ಅಧಿವೇಶನವೂ ನಡೆಯಿತು.


ಶಿಕ್ಷಣತಜ್ಞೆ ಹಾಗೂ ಸಾಮಾಜಿಕ ಉದ್ಯಮಿ ಕೀರ್ತಿ ಕೃಷ್ಣ ಮತ್ತು ಶೈಕ್ಷಣಿಕ ಮನೋವಿಜ್ಞಾನಿ ನ್ಯಾಂತಿನಿ ಮುರುಗಾನಂದಂ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಮಕ್ಕಳ ಭಾವನಾತ್ಮಕ ಆರೋಗ್ಯ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಸಮಾನ ಮಹತ್ವ ನೀಡುವ ಉದ್ದೇಶವನ್ನು ಹೊಂದಿದ್ದಾರೆ.
ಇದು ಸಮುದಾಯ ಆಧಾರಿತ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕಾ ಕೇಂದ್ರವಾಗಿದ್ದು, ಮಕ್ಕಳು ಮತ್ತು ವಯಸ್ಕರು ಭಾಷೆ, Sಖಿಇಒ, ಯೋಗ, ನಾಟಕ, ಪ್ರಕೃತಿ, ಕಲೆ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಅನುಭವಾತ್ಮಕವಾಗಿ ಕಲಿಯಲು ನೆರವಾಗುತ್ತದೆ.
ಶಾಲೆಗಳೊಂದಿಗೆ ಕೈಜೋಡಿಸಿ ಶಿಕ್ಷಕರು, ಪೋಷಕರು ಹಾಗೂ ಶಾಲಾ ಸಮುದಾಯದ ಸಹಕಾರದೊಂದಿಗೆ ಭಾವನಾತ್ಮಕವಾಗಿ ಸುರಕ್ಷಿತ ಕಲಿಕಾ ವಾತಾವರಣವನ್ನು ನಿರ್ಮಿಸಲು ನೆರವಾಗುವ ಕಾರ್ಯಕ್ರಮವಾಗಿದೆ.

ಮಾತನಾಡಿದ ವೇಟಾಸ್‌ನ ಸಹ-ಸಂಸ್ಥಾಪಕ ಹಾಗೂ ಅಪೋಲೋ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಸಮೀರ್ ಬನ್ಸಲ್, “ಭಾರತದಲ್ಲಿ ಮಾನಸಿಕ ಆರೋಗ್ಯ ಮತ್ತು ಸಮಗ್ರ ಶಿಕ್ಷಣದ ಬಗ್ಗೆ ಜಾಗೃತಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಯನ್ನು ದೈನಂದಿನ ಬದುಕಿನ ಸಹಜ ಭಾಗವಾಗಿಸುವುದು ನಮ್ಮ ಉದ್ದೇಶ” ಎಂದರು. ಕ್ರೈಸ್ಟ್ ವಿಶ್ವವಿದ್ಯಾಲಯದ ವಕ್ತಾರರು ಮಾತನಾಡಿ, ಇಂದಿನ ವ್ಯವಹಾರಕೇಂದ್ರಿತ ಜಗತ್ತಿನಲ್ಲಿ ಮಕ್ಕಳಲ್ಲಿ ಕೃತಜ್ಞತೆ, ಸಹಾನುಭೂತಿ ಮತ್ತು ಸ್ಥೈರ್ಯದಂತಹ ನೈತಿಕ ಮೌಲ್ಯಗಳನ್ನು ಬೆಳೆಸುವುದು ಅತ್ಯಗತ್ಯ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ೯೧೦೮೯೦೬೦೦೯ಸಂಪರ್ಕಿಸಿ ದೂರವಾಣಿ: