
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.20: ಬಸವ ಜಯಂತಿ ಅಂಗವಾಗಿ ನಿನ್ನೆ ಇಲ್ಲಿನ ಬಸವೇಶ್ವರ ನಗರ, ರೇಣುಕಾಚಾರ್ಯನಗರ, ನೆಹರೂ ಕಾಲೋನಿಯಲ್ಲಿ ರಾಷ್ಟ್ರೀಯ ಬಸವ ದಳದಿಂದ ಬಸವೇಶ್ವರ ಭಾವಚಿತ್ರವನ್ನು ಸಾರೋಟದಲ್ಲಿ ಇರಿಸಿ ಬಸವ ಭಕ್ತರಿಂದ ವಚನಗಾಯನದ ಮೂಲಕ ಆಕರ್ಷಕ ಶೋಭಾಯಾತ್ರೆ ಪ್ರತಿ ವರ್ಷದಂತೆ ನಡೆಸಲಾಯ್ತು.
ಶೋಭಾಯಾತ್ರೆಯಲ್ಲಿ ಬಸವ ಭಕ್ತರಾದ ರವಿಶಂಕರ್, ಗಮನಗಾವತಿ ವೀರೇಶ್, ಶಶಿಧರ್, ನಿಷ್ಟಿ ರುದ್ರಪ್ಪ ಮೊದಲಾದವರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಬಸವ ಮಂಟಪದಲ್ಲಿ ಬಸವಣ್ಣನ ಜನನ, ತೊಟದಟಿಲ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನಡೆಯಿತು.






















