
ನವಲಗುಂದ,ಸೆ.೧೭: ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ಪರಿಣಾಮಕಾರಿಯಾಗಿ ತರುವ ನಿಟ್ಟಿನಲ್ಲಿ ದಿ.ಶಾಸಕ ಶಂಕರಗೌಡ. ವಿ.ಪಾಟೀಲ ಶಲವಡಿ ಮಹತ್ತರ ಪಾತ್ರವಹಿಸುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.
ಅಮರಗೋಳದಲ್ಲಿ ನವಲಗುಂದ ಹಿರಿಯ ಸಹಕಾರಿ ದುರಿಣರು ಹಾಗೂ ಮಾಜಿ ಶಾಸಕರಾದ ಲಿಂ ಶಂಕರಗೌಡ. ವಿ. ಪಾಟೀಲ (ಶಲವಡಿ) ೨೫ನೇ ಪುಣ್ಯಸ್ಮರಣೆ, ಅವರ ಧರ್ಮಪತ್ನಿ ಲಿಂ ಲಕ್ಷಿ÷್ಮÃಬಾಯಿ ಶಂಕರಗೌಡರು ಪಾಟೀಲ ೧೨ನೇ ಪುಣ್ಯಸ್ಮರಣೆ ಹಾಗೂ ಲಿಂ. ದೇಸಾಯಿಗೌಡ.ಶಂ. ಪಾಟೀಲ ೬ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಅವರ ಕುಟುಂಬಸ್ಥರಾದ ಧಾರವಾಡ ಕೆ.ಸಿ.ಸಿ. ಬ್ಯಾಂಕ ಮಾಜಿ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ, ಶಂಕರಮ್ಮ ಎಸ್. ಪಾಟೀಲ, ರಾಜುಗೌಡ ಶಂ. ಪಾಟೀಲ, ಪ್ರಭುಗೌಡ ಶಂ. ಪಾಟೀಲ, ಹಾಗೂ ಧಾರವಾಡ ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರಾದ ಶರಣಗೌಡ. ಬಾಪುಗೌಡ.ಪಾಟೀಲ, ನವಲಗುಂದ ಪಿ. ಎಲ್. ಡಿ. ಬ್ಯಾಂಕ್ ಅಧ್ಯಕ್ಷ ಗುರುಪ್ರಸಾದ ದೇಸಾಯಿಗೌಡರು ಪಾಟೀಲ (ಶಲವಡಿ) ಅವರು ಪ್ರತಿವರ್ಷ ಅವರ ಪುಣ್ಯಸ್ಮರಣೆ ಅಂಗವಾಗಿ ಅರೋಗ್ಯ ತಪಾಸಣೆಯಂತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನಿಯ ಎಂದರು.
ಬಾಪೂಗೌಡ ಪಾಟೀಲ ಮಾತನಾಡಿ ಅಪ್ಪಾ…ಎಂಬ ಪದವೇ ಅದ್ಭುತ. ನನ್ನ ತಂದೆ ನಮ್ಮನ್ನಗಲಿ ೨೫ ವರ್ಷವಾದರೂ ಅವರ ನೆನಪು ಸದಾ ಚಿರಸ್ಮರಣೀಯ. ನನ್ನ ತಂದೆ ಇಲ್ಲದಿದ್ದರೂ,ಅವರು ಹೇಳಿಕೊಟ್ಟ ಜೀವನದ ಪಾಠ, ಅವರ ಸ್ಫೂರ್ತಿಯ ಮಾತುಗಳು ನನ್ನ ಮನದಲ್ಲಿ ಎಂದೆAದಿಗೂ ಅಮರ ಎಂದರು.
ನವಲಗುAದ ಪಿ. ಎಲ್. ಡಿ. ಬ್ಯಾಂಕ್ ಅಧ್ಯಕ್ಷ ಗುರುಪ್ರಸಾದ ದೇಸಾಯಿಗೌಡರು ಪಾಟೀಲ (ಶಲವಡಿ) ಮಾತನಾಡಿ ನಮ್ಮ ಅಜ್ಜನವರು ಮಾಜಿ ಶಾಸಕರಾದ ಶಂಕರಗೌಡ ಪಾಟೀಲ ಹಾಗೂ ದೇಸಾಯಿಗೌಡ.ಶಂ. ಪಾಟೀಲ ಅವರು ಜಾತಿ ಬೇಧ ಮರೆತು ತಮ್ಮ ಜೀವನೂದ್ಧಕ್ಕೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಾಡಿದಾತ್ಯಂತ ಹೆಸರುವಾಸಿಯಾಗಿದ್ದರು ಎಂದರು.
ಚಿಕೇನಕೊಪ್ಪದ ಅಂಧರ ಕಲ್ಯಾಣ ಆಶ್ರಮ ಶ್ರೀ ಚನ್ನವೀರ ಶರಣರು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು
ಶಾಸಕ ಎನ್. ಎಚ್ ಕೋನರಡ್ಡಿ,ಮಾಜಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಮೋಹನ ಲಿಂಬಿಕಾಯಿ, ವೀರಣ್ಣ ಮತ್ತಿಕಟ್ಟಿ, ಐ ಜಿ ಸನದಿ, ವರ್ಧಮಾನಗೌಡ ಹಿರೇಗೌಡ್ರ, ಬಂಗಾರೇಶ ಹಿರೇಮಠ, ಎ ಬಿ ಹಿರೇಮಠ, ಸದುಗೌಡ ಪಾಟೀಲ, ಜೀವನ ಪವಾರ, ಪ್ರಕಾಶ ಶಿಗ್ಲಿ ಇತರರು ಪಾಲ್ಗೊಂಡಿದ್ದರು.




























