
ಸಂಜೆವಾಣಿ ವಾರ್ತೆ
ಬಳ್ಳಾರಿ, ನ.೧೧: ನಗರದ ವಿವಿಧ ವಾರ್ಡ್ಗಳಲ್ಲಿರುವ ಶಾಖಾ ಗ್ರಂಥಾಲಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ, ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲು ನಗರ ಕೇಂದ್ರ ಗ್ರಂಥಾಲಯದ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ ೭ರಂದು ಸಭೆ ನಡೆಯಿತು.
ಸಭೆಯ ಬಳಿಕ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ನಗರದ ವಿವಿಧ ಶಾಖಾ ಗ್ರಂಥಾಲಯಗಳಿಗೆ ಖುದ್ದಾಗಿ ಭೇಟಿ ನೀಡಿದ ಮಹಾಪೌರರು, ಅಲ್ಲಿನ ಕಟ್ಟಡಗಳ ಸ್ಥಿತಿ, ಶೌಚಾಲಯ, ಕಾಂಪೌAಡ್ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು.
ವಾರ್ಡ್ ನಂ. ೨೩ರ ಅಂಬೇಡ್ಕರ್ ನಗರದಲ್ಲಿ ಮೇಲ್ಭಾಗದ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಅನುಕೂಲ ಕಲ್ಪಿಸುವ ಕುರಿತು ಚರ್ಚಿಸಲಾಯಿತು. ವಾರ್ಡ್ ನಂ. ೧ರ ಕೇಂದ್ರ ಕಾರಾಗೃಹದ ಹಿಂಭಾಗದಲ್ಲಿರುವ ಗ್ರಂಥಾಲಯ ಕಟ್ಟಡದ ಸ್ಥಳದ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.
ಅದೇ ರೀತಿ ವಾರ್ಡ್ ನಂ. ೩೯ರ ಕೋಟೆ ಪ್ರದೇಶದಲ್ಲಿರುವ ಗ್ರಂಥಾಲಯವನ್ನು ಶ್ರೀ ಮೇಧ ಕಾಲೇಜಿನ ವಾಟರ್ ಬೂಸ್ಟರ್ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆ ಪರಿಶೀಲಿಸಲಾಯಿತು. ವಾರ್ಡ್ ನಂ. ೨೫ರ ರೇಡಿಯೋ ಪಾರ್ಕ್ ಸಮೀಪದ ಗ್ರಂಥಾಲಯಕ್ಕೆ ಕಾಂಪೌAಡ್ ವಾಲ್ ನಿರ್ಮಿಸುವುದು ಹಾಗೂ ಪ್ರಸಿದ್ಧ ರೇಡಿಯೋ ಪಾರ್ಕ್ನಲ್ಲಿ ಹಿರಿಯ ನಾಗರಿಕರ ಅನುಕೂಲಕ್ಕಾಗಿ ದಿನಪತ್ರಿಕೆಗಳ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಲಾಯಿತು.
ಇದಲ್ಲದೆ ಕುವೆಂಪು ನಗರ ಹಾಗೂ ಬಂಡಿಹಟ್ಟಿ ಶಾಖಾ ಗ್ರಂಥಾಲಯಗಳ ಸ್ಥಳೀಯ ಸಮಸ್ಯೆಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಿದ್ಧಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ಹಂತದಲ್ಲಿ ನಿಯಮಾನುಸಾರ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಜಾನಕಮ್ಮ, ಶ್ರೀಮತಿ ಕವಿತಾ ಹೊನ್ನಪ್ಪ ಹಾಗೂ ಸಂಬAಧಪಟ್ಟ ವಾರ್ಡ್ಗಳ ಸದಸ್ಯರಾದ ಶ್ರೀಮತಿ ಶಶಿಕಲಾ, ಜಗನ್ನಾಥ, ಎಂ. ಗೋವಿಂದರಾಜ ಸೇರಿದಂತೆ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.





















