
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ಶಾಂತ್ಲೋರುವಗೋತ್ರದ ಗೇಣಿಕಾಳೇಶ್ವರ ನೂತನ ಬಿಳ್ಳಿ ಮೂರ್ತಿ ಪ್ರತಿಷ್ಠಾಪನೆ ತಾಲೂಕಿನ ಕುಡುತಿನಿ ಗ್ರಾಮದಲ್ಲಿ ಇಂದು ಮಾಡಲಾಯಿತು.
ಶರಣಯ್ಯ ಓಡೆಯರ್ ಬಳ್ಳಾರಿ ಮತ್ತು ಜಂಬಯ್ಯ ಓಡೆಯರ್ ದೇವಲಾಪುರ ಪ್ರತಿಷ್ಠಾಪನಾ ಕಾರ್ಯ ನಡೆಸಿಕೊಟ್ಟರು, ಇದಕ್ಕೂ ಮುನ್ನ ನಿನ್ನೆ ಹಂಪಿಯ ನದಿಯಿಂದ ನೂತನ ದೇವರ ಪೂಜಾ ಕೈಕರ್ಯ ನಡೆಸಿಕೊಂಡು ರಾತ್ರಿ ಎಲ್ಲಾ ದೇವರುಗಳ ಮಂದೆ ಸೇರಿ ಇಂದು ಬೆಳಿಗ್ಗೆ ಹಾಲುಬಾವಿಯಲ್ಲಿ ಗಂಗೆ ಪೂಜೆ ಸಲ್ಲಿಸಿ ಡೊಳ್ಳು ಕಳಸ ವಾದ್ಯಗಳೊಂದಿಗೆ ಮುಖ್ಯ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ಪ್ರತಿಷ್ಠಾಪನೆ ಮಾಡಲಾಯಿತು,
ಗುರುಹಿರಿಯರು ಮಹಿಳೆಯರು ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.






















