Home ಜಿಲ್ಲೆ ಮೈಸೂರು ಕಾಲ ಭೈರವೇಶ್ವರ, ಆಂಜನೇಯ ಪವರ್ ಫುಲ್ ದೇವರು: ನಿರ್ಮಲಾನಂದನಾಥ ಶ್ರೀ

ಕಾಲ ಭೈರವೇಶ್ವರ, ಆಂಜನೇಯ ಪವರ್ ಫುಲ್ ದೇವರು: ನಿರ್ಮಲಾನಂದನಾಥ ಶ್ರೀ

ಸಂಜೆವಾಣಿ ವಾರ್ತೆ
ಮಂಡ್ಯ:ಮೇ.05:-
ಸತ್ಯ ಧರ್ಮ ಮಾರ್ಗದಲ್ಲಿ ನಡೆದರೆ ಮನುಷ್ಯನಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಆಧ್ಯಾತ್ಮಿಕತೆ ಮರೆತರೆ ಬೇರಿಲ್ಲದ ಮರದಂತೆ ಜೀವನ ಆಗುತ್ತದೆ ಈ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.


ತಾಲೂಕಿನ ಕೊತ್ತತ್ತಿ ಹೋಬಳಿ ಕ್ಯಾತುಂಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಭೈರವೇಶ್ವರ ದೇವಾಲಯ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಊರಿನ ದೈವ ಶ್ರೀಭೈರವೇಶ್ವರ ಸ್ವಾಮಿಗೆ ದೇವಾಲಯ ಕಟ್ಟಿದ್ದೀರಿ ದೇವರು ಕೂಡ ನಮಗಾಗಿ ಇರುತ್ತಾನೆಯೇ ಹೊರತು ದೇವರೇ ಬಂದು ಭಕ್ತರಲ್ಲಿ ದೇವಾಲಯ ನಿರ್ಮಿಸಿಕೊಡಿ ಎಂದು ಕೇಳುವುದಿಲ್ಲ.ನಮ್ಮ ಪ್ರತಿ ಕಾರ್ಯದಲ್ಲೂ ಭಗವಂತ ಇರುತ್ತಾನೆ ಎಂದು ಉಸಿರಾಟದಂತೆ ಆತನ ಸ್ಮರಣೆ ಮಾಡುತ್ತಿದ್ದರೆ ಆತನ ಅನುಭೂತಿ ನಮಗಾಗುತ್ತದೆ ಎಂದು ತಿಳಿಸಿದರು.
ಆಧುನಿಕತೆ ಬೆಳೆದಂತೆ ವಿದ್ಯ ಜಾಸ್ತಿ ಆಗುತ್ತಿರುವ ದಿನಮಾನದ ಗಳಿಗೆಯಲ್ಲಿ ಹೇಳುವುದನ್ನು ಕೇಳುವ ಪರಿಸ್ಥಿತಿ ಯಾರಲ್ಲೂ ಇಲ್ಲ. ಹೇಳುವುದನ್ನು ಎಲ್ಲವನ್ನು ಅರ್ಥವಾಗಿ ವೈಜ್ಞಾನಿಕವಾಗಿ ಹೇಳಬೇಕು ಎಂದು ತಿಳಿಸಿದರು.


ಪೆÇೀಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿ, ಅದಕ್ಕಿಂತ ಮುಖ್ಯವಾಗಿ ಉತ್ತಮ ಸಂಸ್ಕಾರ ಕೊಡಿ, ಮನೆಯಲ್ಲಿ ಮಕ್ಕಳಿಗೆ ತಾಯಂದಿರು ಸಂಸ್ಕಾರಯುತ ವಾಗಿ ಬದುಕಲು ಹೇಳಿಕೊಡಿ ಎಂದು ತಿಳಿಸಿದರು. ದೇವರಿಗೆ ಗಂಡು-ಹೆಣ್ಣು ಭೇದ ಇಲ್ಲ.ಎಲ್ಲವನ್ನು ನೋಡುವ ಕಣ್ಣು ತನ್ನನ್ನು ತಾನು ನೋಡಿ ಕೊಳ್ಳುವುದಿಲ್ಲ.ಕಾಲ ಭೈರವೇಶ್ವರ ಮತ್ತು ಆಂಜನೇಯ ಪವರ್ ಫುಲ್ ದೇವರು. ಸ್ವಾಮಿ ನಮ್ಮ ಸುತ್ತ ಮುತ್ತ ಇರುವುದರಿಂದ ನಾವು ಎರಡು ದೇವರಿಗೆ ಹುಷಾರಾಗಿ ನಡೆದುಕೊಳ್ಳಬೇಕು. ಭಕ್ತಿಯಿಂದ ಪೂಜೆ ಮಾಡೋಣ ಎಂದು ತಿಳಿಸಿದರು.


ಕಾಯಿಲೆ ಬಂದಾಗ ವೈದ್ಯರ ಹತ್ತಿರ ಹೋಗುತ್ತೇವೋ ಅದೇ ರೀತಿ ದೇವರ ಹತ್ತಿರ ಹೋದಾಗ ಮನಸ್ಸಿನ ಕಾಯಿಲೆ ಏನು ಎಂದು ದೇವರಿಗೆ ಗೊತ್ತಾಗುತ್ತದೆ ಆಗ ದೇವರು ಅದಕ್ಕೆ ಪೂರಕವಾಗಿರುವ ರೀತಿಯಲ್ಲಿ ನಮಗೆ ಏನು ಔಷಧಿ ಬೇಕು ಅದನ್ನು ಇಂಜೆಕ್ಟ್ ಮಾಡಿ ಅವನೇ ಕೊಟ್ಟು ಕಳಿಸುತ್ತಾನೆ.ನಾವು ದೇವರ ಹತ್ತಿರ ಹೋದಾಗ ಏನು ಕೇಳಬೇಕು ಎಂದರೆ ಜಗತ್ತಿಗೆ ನಮ್ಮನ್ನು ಕರೆದು ಕೊಂಡು ಬಂದಿದ್ದೀಯಾ ನನಗೆ ಏನು ಬೇಕು ಎಂದು ನಿನಗೆ ಗೊತ್ತಿದೆ ಅದನ್ನಷ್ಟೇ ಕೊಟ್ಟು ನಮ್ಮನ್ನು ಕಾಪಾಡು ಎಂದು ಭಕ್ತಿಯಿಂದ ದೇವರನ್ನು ಕೇಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ, ಗ್ರಾಮದ ಮುಖಂಡರಾದ ಯಜಮಾನ್ ಕೆ.ಟಿ.ಪುಟ್ಟಸ್ವಾಮಿ,ಕೆ.ಎಂ. ಬಸವರಾಜು, ಕೃಷ್ಣ,ಲೋಕೇಶ್,ಕೆ.ಕಿರಣ್, ಡಾ.ಕೆ.ಎಂ. ಶಿವಕುಮಾರ್, ಶಂಭೂನಹಳ್ಳಿ ಕೃಷ್ಣ,, ಕಾಳೇಗೌಡ, ಸಿದ್ದೇಗೌಡ, ಸೇರಿದಂತೆ ಮತ್ತಿತರರು ಹಾಜರಿದ್ದರು.


ಇದಕ್ಕೂ ಮುನ್ನ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಶ್ರೀ ಕಾಲಭೈರವೇಶ್ವರ ದೇವಾಲಯದ ಉದ್ಘಾಟನೆ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.