Home ಜಿಲ್ಲೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

ಅಣ್ಣಿಗೇರಿ,ಮೇ.೨೨: ನಲವಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಯುವಕರಿಗಾಗಿ ಬಿಜೆಪಿ ಮುಖಂಡರಾದ ದೇವರಾಜ್ ಬ. ದಾಡಿಬಾವಿ ಆ ಯೋಜನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ನಾಮಾಂಕಿತ ನಮೋ ಕ್ರಿಕೆಟ್ ಪಂದ್ಯಾವಳಿಗಳನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಬಿಜೆಪಿ ಮುಖಂಡರಾದ ಸುರೇಶ್ ಗಾಣಿಗೇರ್ ಉದ್ಘಾಟನೆ ನೆರವೇರಿಸಿ, ಯುವಕರು ಕ್ರೀಡಾಮನೋಭಾವನೆ ಬೆಳೆಸಿಕೊಳ್ಳಲು ಕರೆ ನೀಡಿದರು.

ಆಯೋಜಕರಾದ ದೇವರಾಜ್ ದಾಡಿಬಾವಿ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ರವರು ಕ್ರೀಡೆಗಾಗಿ ಸರ್ಕಾರದಿಂದ ಸಾಕಷ್ಟು ನೆರವು ನೀಡುತ್ತಿದ್ದು ಯುವಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.

ಮುಖಂಡರಾದ ರಘು ಪಾಟೀಲ್, ಬಸವರಾಜ ರಾಮಣ್ಣವರ್, ಎಚ್. ಕೆ. ಪಾಟೀಲ್, ಮಹಾದೇವ ಚುಂಚನೂರ್, ಹನುಮಂತಗೌಡ ರಾಯನಗೌಡ, ಬಸವರಾಜ ರಾಮಣ್ಣವರ, ಡಾ. ಬಸವರಾಜ್ ಯತ್ನಳ್ಳಿ, ಸೋಮಶೇಖರಯ್ಯ ಹಿರೇಮಠ, ಪ್ರತೀಕ್ ಕುಂದಗೋಳ, ಮಂಜುನಾಥ್ ಹಡಪದ, ಅಲೋಕ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.