Home Uncategorized ಕಾನೂನು ಬಾಹೀರ ಜಮೀನು ವರ್ಗಾವಣೆ ರದ್ದಿಗೆ ಮನವಿ

ಕಾನೂನು ಬಾಹೀರ ಜಮೀನು ವರ್ಗಾವಣೆ ರದ್ದಿಗೆ ಮನವಿ

(ಸಂಜೆವಾಣಿ ಪ್ರತಿನಿಧಿಯಿಂದ)

 ಬಳ್ಳಾರಿ, ಏ.13:  ತಾಲ್ಲೂಕಿನ, ಹದ್ದಿನಗುಂಡು ಗ್ರಾಮದ ಸರ್ವೆ ನಂ.154*1, ವಿಸ್ತೀರ್ಣ 4.56 ಎಕರೆ ಭೂಮಿ ಕೈಗಾರಿಕೆಗೆ ಸಂಬಂಧಿಸಿದ್ದು. ಇದನ್ನು ಮಾರಾಟ ಮಾಡಲು ಸಂಬಂಧಿತ ಇಲಾಖೆಗಳಿಂದ ಮಾರಲು ಅನುಮತಿ ಪಡೆಯಬೇಕು. ಆದರೆ ನಿಯಮ ಬಾಹೀರವಾಗಿ ಮಾರಾಟ ಮಾಡಿ ಹಕ್ಕು ಬದಲಾವಣೆ ಮಾಡಿ ಪಹಣಿ  ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲುಸಾಮಾಜಿಕ ಕಾರ್ಯಕರ್ತ ಊಳೂರು ಸಿದ್ದೇಶ ಎಡಿಸಿ ಮಹಮ್ಮದ್ ಝುಬೇರ್ ಅವರಿಗೆ ಇಂದು ಮನವಿ ಸಲ್ಲಿಸಿದ್ದಾರೆ.

 ಹದ್ದಿನಗುಂಡು ಗ್ರಾಮದ ಸರ್ವೆ ನಂ.154*1, ವಿಸ್ತೀರ್ಣ 4.56 ಎಕರೆ ಭೂಮಿಯನ್ನು ಬಳ್ಳಾರಿ ಸ್ಟೀಲ್ಸ್ ಅಂಡ್  ಅಲೋಯ್ಸ್ ಲಿಮಿಟೆಡ್ ಎಂದು ಇದ್ದು, ರಿಯಾಜ್ ಅಬ್ದುಲ್ಶೇಖ್  ಇವರಿಗೆ ಕ್ರಯ ಆಗಿರುತ್ತದೆ.

ಈ ಜಮೀನಿಗೆ  ತಾಲ್ಲೂಕು ಕಛೇರಿಯಿಂದ  21 ಫಾರಂ ಬಂದಿದೆ. ಗ್ರಾಮ ಲೆಕ್ಕಾಧಿಕಾರಿಗಳ ವರದಿ ಪ್ರಕಾರ ಈ ಜಮೀನುನಲ್ಲಿ ಜಿ.ಡಿ.ಎಂದು ಇದ್ದು.  ಯಾವುದೇ ಕೃಷಿ ಚಟುವಟಿಕೆ ನೆಡೆದಿರುವುದಿಲ್ಲ  ಬೀಳು ಇದೆ  ವರದಿ ನೀಡಿದ್ದಾರೆ.

 ತಹಶೀಲ್ದಾರರು ಈ ಜಮೀನಿಗೆ ಸಂಬಂಧಿಸಿದಂತೆ, ವಹಿವಾಟು ಸಂಖ್ಯೆ: 153/2024-25, ಹಕ್ಕು ಬದಲಾವಣೆ ಸಂಖ್ಯೆ: 42/2024-2025ರನ್ನು ರದ್ದು ಪಡಿಸಿ ಯಥಾಸ್ಥಿತಿ ಕಾಪಾಡಲು ಆದೇಶಿಸಿದ್ದಾರೆ.

ಆದರೂ  ನಿಯಮಾ ಬಾಹೀರವಾಗಿ ಹಕ್ಕು ಬದಲಾವಣೆ ಮಾಡಿ ಕಳೆದ ಮಾರ್ಚ 31 ರಂದು ಹಕ್ಕು ಬದಲಾವಣೆ ಮಾಡಿದೆ. ಹೀಗೆ ಮಾಡಿದವರ ಮೇಲೆ ಕ್ರಮಜರುಗಬೇಕು. ಹಕ್ಕು ಬದಲಾವಣೆ ಮತ್ತು ಪಹಣಿ ಮಾಡಿರುವುದನ್ನು ರದ್ದು ಪಡಿಸಬೇಕೆಂದು ಮನವಿ ಮಾಡಿದ್ದಾರೆ.