
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ ಜೂ 1 :- ಪಟ್ಟಣದ ಬಸ್ ನಿಲ್ದಾಣದ ಹಿಂಭಾಗ ಸುತ್ತಲೂ ಕಾಂಪೌಂಡ್ ಗೆ ನಿರ್ಮಿಸಿರುವ ಸರಳಿನ ಮಧ್ಯೆ ಯುಕನ್ನೊಬ್ಬ ಮೃತ ಪಟ್ಟಿ ರುವ ಘಟನೆ ಶನಿವಾರ ಬೆಳಗ್ಗೆ ತಿಳಿದಿದೆ. ಬೆಳ್ಳಂಬೆಳಗ್ಗೆ ಸರಳಿನಲ್ಲಿ ಸಿಲುಕಿ ಮೃತಪಟ್ಟಿರುವ ಯುವಕನ ಶವ ನೋಡಿದ ಸರ್ವಜನಿಕರು ಪಟ್ಟಣ ಪೆÇಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಟ್ಟಣ ಪೆÇಲೀಸ್ ಠಾಣೆಯ ಪೆÇಲೀಸರು ಪರಿಶೀಲನೆ ನಡೆಸಿ ಅಪರಿಚಿತ ಮೃತ ದೇಹವೆಂದು ಪರಿಗಣಿಸಿ ಆಂಬುಲೆನ್ಸ್ ರಾಜೇಶ್ ಸಹಾಯದಿಂದ ಮೃತ ದೇಹವನ್ನು ಪಟ್ಟಣದ ಉಪವಿಭಾಗ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಮೃತನ ಬಳಿ ಯಾವುದೇ ಗುರುತರವಾದ ವಿಳಾಸವಿಲ್ಲದ ಕಾರಣ ಈತನ ಮೃತ ದೇಹವನ್ನು ಅಪರಿಚಿತ ಮೃತ ದೇಹವೆಂದು ಪೆÇಲೀಸರು ಪರಿಗಣಿಸಿದ್ದಾರೆ.
ಮೃತನು ಮದ್ಯಪಾನ ಮಾಡಿ ರಾತ್ರಿ ವೇಳೆ ಬಿದ್ದು ಸರಳಿಗೆ ಸಿಲುಕಿಕೊಂಡಿರಬಹುದು ಅಥವಾ ಯಾರಾದರೂ ನೂಕಿದಾಗ ಸರಳಿಗೆ ಸಿಲುಕಿಕೊಂಡಿರಬಹುದೇ ಎಂಬ ನಾನಾ ರೀತಿಯ ಅನುಮಾನದ ಮಾತುಗಳು ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು.
ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಈ ರೀತಿಯಲ್ಲಿ ವ್ಯಕ್ತಿಗಳು ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗಿದೆ. ಕೆಲವು ವ್ಯಕ್ತಿಗಳು ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಂದ ಹಣವನ್ನು ಕುಡಿದು ಸಿಕ್ಕಸಿಕ್ಕಲ್ಲಿ ಮಲಗುತ್ತಾರೆ ಮಧ್ಯಪಾನ ಮಾಡಿದ ವ್ಯಕ್ತಿಗೆ ರಾತ್ರಿ ವೇಳೆ ಕುಡಿಯಲು ನೀರು ಬೇಕು ಬಸ್ ನಿಲ್ದಾಣದಲ್ಲಿ ನೀರು ದೊರಕದ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಬಸ್ ನಿಲ್ದಾಣದಲ್ಲಿಯೇ ಸಾವನ್ನಪ್ಪುತ್ತಾರೆ.
ಅನವಶ್ಯಕವಾಗಿ ಎಲ್ಲಿದ್ದರೂ ಬಂದು ಬಸ್ ನಿಲ್ದಾಣದಲ್ಲಿ ಮಲಗುವ ಮತ್ತು ಅಲೆದಾಡುವ ಇಂತಹ ಅಪರಿಚಿತ ಅನಾಥರನ್ನು ನಿರಾಶ್ರಿತಾ ತಾಣಗಳಿಗೂ ಅಥವಾ ಸಂಬಂಧ ಪಟ್ಟ ಪೆÇೀಷಕರ ಬಳಿಗೆ ತಲುಪಿಸಿದರೆ ಇಂತಹ ಸಾವುಗಳನ್ನು ಪಟ್ಟಣದಲ್ಲಿ ತಡೆಗಟ್ಟಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿರುತ್ತದೆ. ಈತನ ಗುರುತು ಪತ್ತೆ ಹಚ್ಚಿದ ಸಂಬಂಧಿಕರು ಪಟ್ಟಣ ಪೆÇಲೀಸ್ ಠಾಣೆಗೆ ಭೇಟಿ ನೀಡಬಹುದು.