Home ಜಿಲ್ಲೆ ಮೈಸೂರು ಹೊಂಗನೂರಿನಲ್ಲಿ ಕಾಂಗ್ರೆಸ್ ಮುಖಂಡನಿಗೆ ಚೂರಿ ಇರಿತ

ಹೊಂಗನೂರಿನಲ್ಲಿ ಕಾಂಗ್ರೆಸ್ ಮುಖಂಡನಿಗೆ ಚೂರಿ ಇರಿತ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ10:
– ಮಾಜಿ ಶಾಸಕ ಎಸ್ ಬಾಲರಾಜು ಬೆಂಬಲಿಗ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೊಂಗನೂರು ಮಹದೇವಸ್ವಾಮಿ ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬರಿಗೆ ಚೂರಿ ಇರಿದು ಪರಾರಿಯಾಗಿರುವ ಘಟನೆ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಗುರುವಾರ ನಡೆದಿದೆ.


ಗ್ರಾಮದ ನಿವಾಸಿ ಹಾಗೂ ಹೊಂಗನೂರು ಗ್ರಾಮ ಪಂಚಾಯಿತಿ ಕಾಂಗ್ರೆಸ್ ಪ್ರಜಾ ಪ್ರತಿನಿಧಿ ಅಧ್ಯಕ್ಷ ಮಹದೇವಯ್ಯ (54) ಹಲ್ಲೆಯಿಂದ ತೀವ್ರ ಗಾಯಗೊಂಡು ಚಾ.ನಗರ ವೈದ್ಯಕೀಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಂಗನೂರು ಮಹದೇವಸ್ವಾಮಿ ಮತ್ತು ಅವರ ಸಂಬಂಧಿ ಸಿದ್ದರಾಜು ವಿರುದ್ದ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ಇನ್ಸ್‍ಪೆಕ್ಟರ್ ಸಾಗರ್ ಕಾರ್ಯಾಚರಣೆ ನಡೆಸಿ, ಅರೋಪಿ ಸಿದ್ದರಾಜು ಅನ್ನು ಬಂಧಿಸಿದ್ದು, ನಾಪತ್ರೆಯಾಗಿರುವ ಪ್ರಮುಖ ಆರೋಪಿ ಮಹದೇವಸ್ವಾಮಿಗಾಗಿ ಶೋಧ ಮುಂದುವರಿಸಿದ್ದಾರೆ.


ಘಟನೆ ವಿವರ : ಹೊಂಗನೂರು ಗ್ರಾಮದ ಮಹದೇವಯ್ಯ ಅವರನ್ನು ಅದೇ ಗ್ರಾಮದ ಸಿದ್ದರಾಜು ಎಂಬಾತ ಕೊಲೆ ಮಾಡುವ ದುರುದ್ದೇಶದಿಂದಲೇ ಕರಿಕಲ್ಲು ವ್ಯವಹಾರ ಮಾತಾಡೋಣ ಬಾ ಎಂದು ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಗ್ರಾಮದ ಬಳಿ ಇರುವ ಹಾಸ್ಟೆಲ್ ಹಾಗೂ ಅಲ್ಲಿಂದ ಸುಮಾರು ದೂರದಲ್ಲಿರುವ ಅಂಬಳೆ ಮತ್ತು ಹೊಮ್ಮ ಹೋಗುವ ರಸ್ತೆ ಮಧ್ಯೆ ಭಾಗದಲ್ಲಿ ಇಬ್ಬರು ಹೋಗುತ್ತಿದ್ದಂತೆ ಎದುರಿಗೆ ಬೈಕ್‍ನಲ್ಲಿ ಬಂದ ಆರೋಪಿ ಮಹದೇವಸ್ವಾಮಿ, ಏಕಾಏಕಿ ಜಗಳ ತೆಗೆದು ನಾಟಕದ ಆಹ್ವಾನ ಪತ್ರಿಕೆಯಲ್ಲಿ ನಮ್ಮ ನಾಯಕರಾದ ಎಸ್. ಬಾಲರಾಜು ಅವರ ಹೆಸರು ಹಾಕಿಸಿಲ್ಲ. ಇದಕ್ಕೆ ನೀನೇ ಕಾರಣ ಎಂದು ಪೂರ್ವನಿಯೋಜನೆಯಂತೆ ಕಣ್ಣಿಗೆ ಖಾರದಪುಡಿಯನ್ನು ಎರಚಿ, ಜೊತೆಯಲ್ಲಿ ತಂದಿದ್ದ ಚೂರಿಯಿಂದ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹೊಡೆದು ಪರಾರಿಯಾಗಿದ್ದಾನೆÉ. ಈ ಘಟನೆಯನ್ನು ಸ್ಥಳದಲ್ಲಿಯೇ ಇದ್ದ ಸಿದ್ದರಾಜು ನೋಡುತ್ತಾ ನಿಂತಿದ್ದ ಎಂದು ಹಲ್ಲೆಗೊಳಗಾದ ಮಹದೇವಯ್ಯ ದೂರಿನÀಲ್ಲಿ ತಿಳಿಸಿದ್ದಾರೆ.


ತಕ್ಷಣ ಗ್ರಾಮಕ್ಕೆ ಬಂದು ಅಲ್ಲಿಂದ ನೇರವಾಗಿ ಚಾ.ನಗರ ವೈದ್ಯಕೀಯ ಕಾಲೇಜು ಅಸ್ಪತ್ರೆU ಚಿಕಿತ್ಸೆಗೆ ದಾಖಲಾಗಿದ್ದೇನೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಬಿಜೆಪಿ ಮುಖಂಡನಾಗಿರುವ ಮಹದೇವಸ್ವಾಮಿ ಈ ಹಿಂದೆಯೂ ಸಹ ಮಾಜಿ ಶಾಸಕರಾದ ದಿ. ಎಸ್. ಜಯಣ್ಣ ಹಾಗೂ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ್‍ಸ್ವಾಮೀಜಿಗಳ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟರ್ ಆಗಿದ್ದರು. ಈ ಸಂಬಂಧ ಮಹದೇವಯ್ಯ ಮತ್ತು ಇತರರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದರು. ಈ ದ್ವೇಷವನ್ನಿಟ್ಟುಕೊಂಡು ಜೊತೆಗೆ ಮೇ 11 ರಂದು ಗ್ರಾಮದಲ್ಲಿ ನಡೆಯುವ ನಾಟಕದ ಆಹ್ವಾನ ಪತ್ರಿಕೆಯಲ್ಲಿ ನಮ್ಮ ನಾಯಕರಾದ ಎಸ್. ಬಾಲರಾಜು ಹೆಸರು ಹಾಕಿಸಿಲ್ಲ ಎಂದು ಕೋಪಗೊಂಡಿದ್ದ ಮಹದೇವಸ್ವಾಮಿ ಮತ್ತು ಸಿದ್ದರಾಜು ಸಮಯ ಸಾಧಿಸಿ, ನನ್ನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ಅದೃಷ್ಟವಾಶಾತ್ ನಾನು ಪರಾಗಿದ್ದೇನೆ. ಕೊಲೆಗೆ ಯತ್ನ ಮಾಡಿರುವ ಇವರಿಬ್ಬರ ವಿರುದ್ದ ಕಾನೂನು ಕ್ರಮ ಕೈಗೊಳ್ಲಬೇಕೆಂದು ಮಹದೇವಯ್ಯ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.