
ಕಲಬುರಗಿ,ಮೇ.12-ಇಲ್ಲಿನ ವಿಶ್ವೇಶ್ವರಯ್ಯ ನಗರದ ನಿವಾಸಿ, ಹಿರಿಯ ಹವ್ಯಾಸಿ ಛಾಯಾಗ್ರಾಹಕ ಡಾ.ಎಂ.ಡಿ.ಮಿಣಜಗಿಯವರು ರುಮಾನಿಯಾದಲ್ಲಿ ನಡೆದ 10ನೇ ಒ ಎನ್ ವ್ಹಾ ಎಕ್ಸ್ 2026 ಅಂತರರಾಷ್ಟ್ರೀಯ ಆನ್ ಲೈನ್ ಛಾಯಾಚಿತ್ರ ಸ್ಪರ್ಧೆ ಭಾಗವಹಿಸಿದ್ದು ಅವರ ಎರಡು ಛಾಯಾಚಿತ್ರಗಳಿಗೆ ಪ್ರಮಾಣ ಪತ್ರ ಲಭ್ಯಸಿವೆ.
ಅದರಲ್ಲಿ ಒಂದನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಅದರ ಶೀರ್ಷಿಕೆ ” ಕಲರ್ ಫುಲ್ ಪರ್ ಫಾರ್ಮೆನ್ಸ್” ಡಾ.ಎಂ.ಡಿ.ಮಿಣಜಗಿಯವರ ಛಾಯಾಚಿತ್ರಗಳು ವಿಶೇಷವಾಗಿ ಭಾರತದ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತವೆ. ಈ ಚಿತ್ರ ಶಾಸ್ತ್ರೀಯ ನೃತ್ಯ ನಾಟಕ ರಂಗಕ್ಕೆ ಸಂಬಂಧಪಟ್ಟಿದ್ದಾಗಿದೆ.





















