Home ಜಿಲ್ಲೆ ಕಲಬುರಗಿ ಬಸ್ಸು ಹತ್ತುವಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 1.65 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಬಸ್ಸು ಹತ್ತುವಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 1.65 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ,ಮೇ.12-ಮಹಿಳೆಯೊಬ್ಬರು ಬಸ್ ಹತ್ತುವ ಸಂದರ್ಭದಲ್ಲಿ ಅವರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 1.65 ಲಕ್ಷ ರೂ.ಮೌಲ್ಯದ 33 ಗ್ರಾಂ.ಬಂಗಾರದ ಆಭರಣಗಳು ಕಳವಾಗಿರುವ ಘಟನೆ ನಗರದ ಆಳಂದ ಚೆಕ್‍ಪೋಸ್ಟ್ ಹತ್ತಿರ ನಡೆದಿದೆ.
ಕೋಟನೂರ (ಡಿ) ಗ್ರಾಮದ ಕಾಸಿಂಬಿ ರುಕ್ಮುದ್ದಿನ್ ಅವರು ತಮ್ಮ ಅಣ್ಣನ ಮಗಳ ಮದುವೆ ಇದ್ದ ಪ್ರಯುಕ್ತ ಸಾವಳಗಿ (ಬಿ) ಗ್ರಾಮಕ್ಕೆ ಹೋಗಲೆಂದು ಆಳಂದ ಚೆಕ್‍ಪೋಸ್ಟ್ ಹತ್ತಿರ ಬಸ್ ಹತ್ತುವ ವೇಳೆ ಕಳ್ಳರು ಅವರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 75 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ ನೆಕ್ಲೆಸ್, 50 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಮಂಗಳಸೂತ್ರ, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 15 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ 2 ಸಣ್ಣ ಉಂಗುರಗಳು ಸೇರಿ 1.65 ಲಕ್ಷ ರೂ.ಮೌಲ್ಯದ 33 ಗ್ರಾಂ.ಬಂಗಾರದ ಆಭರಣ ಕಳವು ಮಾಡಿದ್ದಾರೆ.
ಈ ಬಗ್ಗೆ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.