Home ಜಿಲ್ಲೆ ಕಲಬುರಗಿ ದೇಶದ ಪ್ರಗತಿ ಅಲ್ಲಿನ ಮಹಿಳೆಯರ ಪ್ರಗತಿಯ ಮೇಲೆ ಅಳೆಯಿರಿ : ಡಾ.ನಮ್ರತಾ ರಾವುತ್

ದೇಶದ ಪ್ರಗತಿ ಅಲ್ಲಿನ ಮಹಿಳೆಯರ ಪ್ರಗತಿಯ ಮೇಲೆ ಅಳೆಯಿರಿ : ಡಾ.ನಮ್ರತಾ ರಾವುತ್

ಕಲಬುರಗಿ: ಒಂದು ದೇಶದ ಪ್ರಗತಿಯಾಗಬೇಕಾದರೆ ಅಲ್ಲಿನ ಮಹಿಳೆಯರ ಪ್ರಗತಿಯ ಆಧಾರದ ಮೇಲೆ ಅಳೆಯಬೇಕು ಎಂದು ಡಾ. ಬಾಬಾ ಸಾಹೇಬ ಅಂಬೇಡ್ಕರ್ ನಂಬಿದ್ದರು ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಮಾಧ್ಯಮ ವಿಭಾಗ ಹಾಗೂ ಮಾಧ್ಯಮ ಸಂಯೋಜಕರಾದ ರಾವುತ್ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆ ಅಂಗವಾಗಿ “ಮಹಿಳಾ ಸಬಲೀಕರಣದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಪಾತ್ರ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಗೆ ಪುರುಷರಷ್ಟು ಸ್ಥಾನಮಾನ ಇರಲಿಲ್ಲ. ಭಾರತ ಸಂವಿಧಾನ ರಚಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಮಹಿಳೆಯರಿಗೆ ಎಲ್ಲ ಹಕ್ಕುಗಳನ್ನು ನೀಡಿದರು. ಸಮಾನ ವೇತನಕ್ಕೆ ಸಮಾನ ವೇತನ, ಮಹಿಳೆಯರ ರಕ್ಷಣೆ, ಕೆಲಸದ ಭದ್ರತೆ ಸೇರಿದಂತೆ ಮಹಿಳೆಯರಿಗೆ ಈ ದೇಶದಲ್ಲಿ ಘನತೆಯ ಬದುಕನ್ನು ನೀಡಿದರು ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಗೆ ಪುರುಷರಷ್ಟು ಸ್ಥಾನಮಾನ ಇರಲಿಲ್ಲ. ಭಾರತ ಸಂವಿಧಾನ ರಚಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಮಹಿಳೆಯರಿಗೆ ಎಲ್ಲ ಹಕ್ಕುಗಳನ್ನು ನೀಡಿದರು. ಸಮಾನ ವೇತನಕ್ಕೆ ಸಮಾನ ವೇತನ, ಮಹಿಳೆಯರ ರಕ್ಷಣೆ, ಕೆಲಸದ ಭದ್ರತೆ ಸೇರಿದಂತೆ ಮಹಿಳೆಯರಿಗೆ ಈ ದೇಶದಲ್ಲಿ ಘನತೆಯ ಬದುಕನ್ನು ನೀಡಿದರು ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಶಶಿಕಾಂತ ಉಡಿಕೇರಿ ಮಾತನಾಡಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಬರವಣಿಗೆಯ ಜೊತೆಗೆ ಓದಿಗೆ ಹೆಚ್ಚು ಮಹತ್ವ ಕೊಡಬೇಕು ಎಂದು ಕುಲಪತಿ ಪೆÇ್ರ. ಶಶಿಕಾಂತ ಉಡಿಕೇರಿ ಅಭಿಪ್ರಾಯಪಟ್ಟರು. ಪತ್ರಕರ್ತರಿಗಗೂ ಕೂಡ ಹಲವು ಜವಾಬ್ದಾರಿಗಳಿವೆ. ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಪತ್ರಕರ್ತರು ಪ್ರಾಮಾಣಿಕ ಮತ್ತು ವಸ್ತುನಿಷ್ಟ ಸುದ್ದಿಗಳಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು.
ನಂತರ ಮಾತನಾಡಿದ ಸಿಂಡಿಕೇಟ್ ಸದಸ್ಯ ಉದಯಕಾಂತ ಪಾಟೀಲ ಮಾತನಾಡಿ ವಿಶ್ವವಿದ್ಯಾಲಯದಲ್ಲಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ವಿಶ್ವವಿದ್ಯಾಲಯಕ್ಕೆ ಹಣದ ಅಡಚಣೆ ಆದರೆ ಸರಕಾರದಿಂದ ನೆರವು ಕೊಡಿಸಲು ಸಹ ನಮ್ಮೆಲ್ಲ ಸಿಂಡಿಕೇಟ್ ಸದಸ್ಯರು ಪ್ರಯತ್ನಿಸುತ್ತೇವೆ ಎಂದರು. ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಓದಿನೊಂದಿಗೆ ರಾಜ್ಯದ ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುವಂತಾಗಲಿ ಎಂದು ಹಾರೈಸಿದರು.
ಸಿಂಡಿಕೇಟ್ ಸದಸ್ಯರಾದ ರಾಘವೇಂದ್ರ ಎಂ ಭೈರಪ್ಪ ಮಾತನಾಡಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಉಳಿಸಲು ಪ್ರಯತ್ನಿಸುವೆ. ಈ ವಿಭಾಗದಲ್ಲಿ ಸ್ಮಾರ್ಟ್ ಕ್ಲಾಸ್ ಮಾಡಲು ಬೇಡಿಕೆ ಇತ್ತು ಅದನ್ನು ಈಡೇರಿಸಿದ್ದೇನೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯ ಪಡೆದುಕೊಂಡು ಉನ್ನತ ಗುರಿಯತ್ತ ಸಾಗಬೇಕು ಎಂದರು. ಸಂಯೋಜಕ ಡಾ. ಸುರೇಶ ಜಂಗೆ ಅಧ್ಯಕ್ಷತೆ ವಹಿಸಿದ್ದರು. ಸಂಪಾದಕ ವಿಠ್ಠಲ್ ಚಿಕಣಿ ಇದ್ದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಅಶೋಕ ಶರಣಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ. ರಾಜಕುಮಾರ ದಣ್ಣೂರು ಸ್ವಾಗತಿಸಿದರು. ಡಾ. ತೀರ್ಥಕುಮಾರ ಬೆಳಕೋಟ ನಿರೂಪಿಸಿ ವಂದಿಸಿದರು.