Home ಜಿಲ್ಲೆ ಸಾರಿಕೆ ಸಂಸ್ಥೆ ಸಿಬ್ಬಂದಿಗೆ ಆರೋಗ್ಯ ತಪಾಸಣೆ

ಸಾರಿಕೆ ಸಂಸ್ಥೆ ಸಿಬ್ಬಂದಿಗೆ ಆರೋಗ್ಯ ತಪಾಸಣೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜೂ.20: ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಹಾಗೂ ಜಿಲ್ಲಾ ಎನ್ ಸಿಡಿ ಘಟಕ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದೇವಿ ನಗರದ ಸಹಯೋಗದೊಂದಿಗೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದ ಬಳ್ಳಾರಿ ಘಟಕ1, ವಿಭಾಗೀಯ ಕಾರ್ಯಾಗಾರ ಹಾಗೂ ವಿಭಾಗೀಯ ಕಛೇರಿ ಕಾರ್ಮಿಕ ಸಿಬ್ಬಂದಿಗಳಿಗೆ ಆರೋಗ್ಯ, ಕಣ್ಣಿನ ಪರೀಕ್ಷೆ ಮತ್ತು ಅಸಂಕ್ರಾಮಿಕ ರೋ, ಕ್ಷಯರೋಗ ತಪಾಸಣೆಗಳನ್ನು ಉಚಿತವಾಗಿ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್. ಚಂದ್ರಶೇಖರ್, ಕ್ಷಯರೋಗ ನಿರ್ಮೂಲನ ಜಿಲ್ಲಾ ಅಧಿಕಾರಿ ಡಾ. ಇಂದ್ರಾಣಿ, ಕಾರ್ಮಿಕ ಕಲ್ಯಾಣ ಅಧಿಕಾರಿ ಕರೇಗೌಡ, ವಿಭಾಗದ ಡಿಟಿಓ, ಇತರೆ ಅಧಿಕಾರಿಗಳು ಪಾಲ್ಗೊಂಡು ಆರೋಗ್ಯ ತಪಾಸಣೆ ಮಹತ್ವ ತಿಳಿಸಿದರು.

300 ಜನ ಕಾರ್ಮಿಕ ಸಿಬ್ಬಂದಿಗಳು ಪಡೆದುಕೊಂಡಿದ್ದು, ಕಣ್ಣು ತಪಾಸಣೆ ಮಾಡಿ ದೃಷ್ಟಿದೊಷ ಇದ್ದಂತಹ ಸಿಬ್ಬಂದಿಗಳಿಗೆ ಕನ್ನಡಕ ಗಳನ್ನು ವಿತರಿಸಲಾಯಿತು.