Home ಜಿಲ್ಲೆ ಸತ್ಯನಾರಾಯಣಪೇಟೆಯ ರಾಘವೇಂದ್ರ ಪಾರ್ಕ್ ದುರಸ್ಥಿ

ಸತ್ಯನಾರಾಯಣಪೇಟೆಯ ರಾಘವೇಂದ್ರ ಪಾರ್ಕ್ ದುರಸ್ಥಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.09: ನಗರದ ಸತ್ಯನಾರಾಯಣ ಪೇಟೆಯ ಮೊದಲ ಕ್ರಾಸ್ ನಲ್ಲಿರುವ ರಾಘವೇಂದ್ರಸ್ವಾಮಿ ಪಾರ್ಕ್ ನಲ್ಲಿ ಗೇಟ್, ಬಯಲು ಜಿಮ್ ನ ಹಲವಾರು ಉಪಕರಣಗಳು ಕೆಟದಟು ಹೋಗಿ ಹಲವು ದಿನಗಳಾಗಿದ್ದವು.

ಈ ಬಗ್ಗೆ ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳಿಗೆ ಹಲವು ಸಲ ದೂರು ನೀಡಿದ್ದರೂ ದುರಸ್ಥಿ ಆಗಿರಲಿಲ್ಲ. ಆದರೆ ಇದನ್ನು ಮನಗಂಡ ಸ್ಥಳೀಯ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ ಕುಮಾರ್ ಅವರು ನಿನ್ನೆ ಹಾಳಾಗಿದ್ದ ಗೇಟ್, ಜಿಮ್ ಉಪಕರಣಗಳನ್ನು ದುರಸ್ಥಿ ಮಾಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.