Home ಜಿಲ್ಲೆ ಶೋಷಣೆಯಿಂದ ಮಹಿಳೆ ಮುಕ್ತವಾಗಬೇಕು

ಶೋಷಣೆಯಿಂದ ಮಹಿಳೆ ಮುಕ್ತವಾಗಬೇಕು

ಸಂಜೆವಾಣಿ ವಾರ್ತೆ

ಬಳ್ಳಾರಿ, ಜೂ.20: ಸಮಾಜದಲ್ಲಿ ಹಲವಾರು ಶತಮಾನಗಳಿಂದಲೂ ಮಹಿಳೆಯರನ್ನು ಶೋಷಣೆಗೆ ಒಳಪಡಿಸುತ್ತಾ ಬರಲಾಗುತ್ತಿದೆ, ಇದಕ್ಕೆ ಮಹಿಳೆಯರೇ ಕಾರಣವೆಂದು ಬಿಂಬಿಸಲಾಗುತ್ತಿದೆ ಎಂದು ಬೆಂಗಳೂರಿನ ಒಂದೆಡೆ ಸಂಸ್ಥೆಯ ಸಂಸ್ಥಾಪಕಾರಾದ ಡಾ ಅಕ್ಕೈ ಪದ್ಮಶಾಲಿ ಹೇಳಿದರು.

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗ, ಯುಜಿ ಇಂಗ್ಲೀಷ್ ಶಿಕ್ಷಕರ ಸಂಘ ಹಾಗೂ ಇಂಗ್ಲೀಷ್ ಹಳೆಯ ವಿದ್ಯಾರ್ಥಿಗಳು ಜಂಟಿಯಾಗಿ ಆಯೋಜಿಸಲಾಗಿದ್ದ ‘ಬಾಡಿ ಆ್ಯಂಡ್ ಲಿಟ್‍ರೆಚರ್’ ಒಂದು ದಿನದ ವಿಚಾರ ಸಂಕಿರಣವನ್ನು ಗಣ್ಯರೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿರುವ ವ್ಯವಸ್ಥೆಗಳು ದೇವದಾಸಿಯರು, ದಲಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರನ್ನು ಶೋಷಣೆಗೆ ದಾರಿ ಮಾಡುಕೊಡುತ್ತೀವೆ. ಮಹಿಳೆಗೆ ಪೂರ್ಣಪ್ರಮಾಣದಲ್ಲಿ ಲೈಂಗಿಕ ಶಿಕ್ಷಣ, ಅಕ್ಷರಜ್ಞಾನ ನೀಡದೆ ಅವಳನ್ನೂ ಇಂದಿಗೂ ಹಲವಾರು ಕಟ್ಟುಪಾಡುಗಳಿಲ್ಲಿರಸಲಾಗಿದೆ. ಸಮಾಜದ ಹಲವಾರು ವ್ಯವಸ್ಥೆಗಳಲ್ಲಿ ಮನಸ್ಥಿತಿ ಕೂಡಾ ಹಾಗೆಯೇ ಇದೆ ಎಂದು ಮಾರ್ಮಿಕವಾಗಿ ಮಾತನಾಡಿದರು..

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ಸಮಾಜದಲ್ಲಿ ವ್ಯಕ್ತಿ ಗೌರವ, ಹಕ್ಕು ಸ್ವಾತಂತ್ರ್ಯವನ್ನು ಕಾಪಾಡುವುದು ಮುಖ್ಯವಾಗಿದೆ. ಹಲವಾರು ನೈತಿಕ ವಿಚಾರಗಳ ಕುರಿತು ವಿದ್ಯಾರ್ಥಿಗಳು, ಸಂಶೋಧಕರು ಗಂಭೀರವಾಗಿ ಚಿಂತನೆ ನಡೆಸಿ, ಸಮಾಜದ ಪರಿವರ್ತನೆಗೆ ಮುಂದಾಗಬೇಕು ಎಂದು ಹೇಳಿದರು.

ವಿವಿಯ ಕುಲಸಚಿವರಾದ ಪ್ರೊ ವಿ ಲೋಕೇಶ್, ಕಲಾ ನಿಕಾಯದ ಡೀನರಾದ ಪ್ರೊ ರಾಬರ್ಟ್ ಜೋಸ್, ಯುಜಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ ಬಸವರಾಜ್ ಟಿ ಎಚ್ ವೇದಿಕೆಯಲ್ಲಿದ್ದರು.

ಇಂಗ್ಲೀಷ್ ಅಧ್ಯಯನ ವಿಭಾಗದ ಡಾ ಸಂತೋಷ ಜಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ನಿಹಾರಿಕಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ ವಾತ್ಸಲ್ಯ ಆರ್ ವಂದಿಸಿದರು.

ವಿವಿಧ ಕಾಲೇಜುಗಳ ಇಂಗ್ಲೀಷ್ ಪ್ರಾಧ್ಯಾಪಕರು ಸೇರಿದಂತೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದರು. ಕನ್ನಡ, ಇಂಗ್ಲೀಷ್ ಮತ್ತು ನಾಟಕ ಹಾಗೂ ಪ್ರದರ್ಶನ ಕಲೆ ಅಧ್ಯಯನ ವಿಭಾಗದ ಎಲ್ಲ ಬೋದಕ ಬೋದಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.