
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.9: ನಾಳೆ ಸಂಜೆ ನಗರದ ಬಸವ ಭವನದಲ್ಲಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡಿರುವ ಆರು ಜನ ಗಣ್ಯರಿಗೆ ಗೌರವ ಸನ್ಮಾನ ಮಾಡಲಿದೆಂದು ಸನಾಜದ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಹೇಳಿದ್ದಾರೆ.
ಶೈಕ್ಷಣಿಕ ಕ್ಷೇತ್ರದ ಸೇವೆಗಾಗಿ ಕಿಷ್ಕಿಂದ ವಿಶ್ವ ವಿದ್ಯಾಲಯದ ಕಲಾಧಿಪತಿ ಡಾ.ಯಶವಂತ ಭೂಪಾಲ್. ಸಾಮಾಜಿಕ ಸೇವೆಗಾಗಿ ಸಂಗನಕಲ್ಲು ಬಸವರಾಜ್. ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಬಳ್ಳಾರಿ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎನ್. ಮಂಜುನಾಥ. ನ್ಯಾಯಾಂಗ ಕ್ಷೇತ್ರದ ಸೇವೆಗಾಗಿ ಮಾಜಿ ಮೇಯರ್ ಪಾರ್ವತಿ ಇಂದುಶೇಖರ್.
ಸಾವಯವ ಕೃಷಿಗಾಗಿ ಸಿಂದವಾಳ ಕೇಶವರಡ್ಡಿ ಮತ್ತು
ಮಾಧ್ಯಮ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ನಡವಿ ವೀರಭದ್ರಗೌಡ ಅವರನ್ನು ಸಮಾರಂಭದಲ್ಲಿ ಭಾಗವಹಿಸುವ ಗಣ್ಯರು ಸನ್ಮಾನಿಸಲಿದ್ದಾರೆಂದು ಹೇಳಿದ್ದಾರೆ.
ನಾಳೆ ಸಂಜೆ 4.15 ರಿಂದ ನಗರದ ದುರ್ಗಮ್ಮ ದೇವಸ್ಥಾನದಿಂದ ಮಲ್ಲಮ್ಮ ಭಾವಚಿತ್ರದ ಮೆರವಣಿಗೆಯು ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಆರಂಭಗೊಂಡು ವಾಲ್ಮೀಕಿ ವೃತ್ತ(ಎಸ್ಪಿ ವೃತ್ತ) ಮೂಲಕ ವಿವಿಧ ಜನಪದ ಕಲಾ ತಂಡಗಳ ಮೂಲಕ ಬಸವ ಭವನದ ಸಭಾಂಗಣದವರೆಗೆ ನಡೆಯಲಿದೆ.
ನಂತರ ಬಸವ ಭವನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು. ಜನಪ್ರತಿದಿಗಳು, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿರುವರು.
ನಗರದ ಉಪನ್ಯಾಸಕ ಬಸವರಾಜ ಅಮಾತಿ ಜಯಂತಿ ಕುರಿತು ಉಪನ್ಯಾಸ ನೀಡುವರು. ಎನ್.ಬಸವರಾಜ್ ತಂಡ ಹೇಮರೆಡ್ಡಿ ಮಲ್ಲಮ್ಮ ಗೀತೆಗಳ ಗಾಯನ ನಡೆಯಲಿದೆ.





















