
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.21: ಇತ್ತ ಮುಂಗಾರು ಮಳೆಯೂ ಇಲ್ಲ. ಅತ್ತ ತುಂಗಭದ್ರ ಡ್ಯಾಂಗೂ ನೀರು ಬಾರದ ಕಾರಣ ತಮ್ಮಜಮೀನುಗಳನ್ನು ಬಿತ್ತನೆಗೆ ಸಿದ್ದೊಡಿಸಿಕೊಂಡಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಒಮ್ಮೊಮ್ಮೆ ಜಲಾಶಯಕ್ಕೆ ಈ ವೇಳೆಗೆ ಅಗತ್ಯ ನೀರು ಬಾರದಿದ್ದರೂ, ಮುಂಗಾರು ಮಳೆ ಬೀಳುತ್ತಿತ್ತು. ಆ ನಿರೀಕ್ಷೆಯಿಂದಲೂ ರೈತರು ತಮ್ಮ ಜಮೀನುಗಳಲ್ಲಿ ರಂಟೆ ಕುಂಟೆ ಹೊಡೆದು ಹದ ಮಾಡಿಕೊಂಡು ಬಿತ್ತನೆಗೆ ಸಿದ್ದತೆ ಮಾಡಿದ್ದರು ಆದರೆ ಮಳೆಯೂ ಆಗಲಿಲ್ಲ.
ಇನ್ನು ಜಲಾಶಯದ ಜಲಾನಯನ ಪ್ರದೇಶದಲ್ಲೂ ಮಳೆ ಬೀಳದ ಕಾರಣ ಜಲಾಶಯಕ್ಕೂ ಹೆಚ್ಚಿನ ನೀರು ಬರಲಿಲ್ಲ. ಸಧ್ಯ ಜಲಾಶಯದಲ್ಲಿ ಕಾಲು ಭಾಗ ಮಾತ್ರ ನೀರಿದೆ. ನಂತರ ಬರಬಹುದು. ಆದರೂ ಈಗಿರುವ ನೀರನ್ನು ಕೃಷಿಗೆ ಬಿಡಲು ಸಾಧ್ಯವಿಲ್ಲ. ನಂತರ ಬರದೇ ಇದ್ದರೆ ಬೆಲಕೆ ನಷ್ಟಕ್ಕೆ ಕಾರಣವಾಗಲಿದೆ.
ಅದಕ್ಕಾಗಿ ಕನಿಷ್ಟ 65 ಟಿಎಂಸಿ ನೀರು ಜಲಾಶಯದಲ್ಲಿ ನೀರು ಸಂಗ್ರಹವಾದರೆ ಮಾತ್ರ ಕಡಿಮೆ ನೀರು ಬಳಕೆಯ ಬೆಲಕೆಗಳನ್ನಾದರೂ ಬೆಲಕಡಯಲು ಕಾಲುವೆಗೆ ನೀರು ಬಿಡಬಹುದು.
ಸಧ್ಯಕ್ಕಂತೂ ಮಳೆಯೂ ಇಲ್ಲದೆ, ಜಲಾಶಯದಲ್ಲಿ ಅಗತ್ಯ ನೀರೂ ಇಲ್ಲದೆ ರೈತರ ಮುಖದಲ್ಲಿ ಆತಂಕ ಮೂಡಿದೆ.
ಒಣಗುತ್ತಿರುವ ಭತ್ತದ ನಾಟಿ:
ಇನ್ನು ತುಂಗಭದ್ರ ನದಿ ದಂಡೆಯ ಸಿರಗುಪ್ಪ ತಾಲೂಕಿನ ರೈತರು ಪ್ರತಿ ವರ್ಷದಂತೆ ನದಿಗೆ ನೀರು ಬರುತ್ತದೆಂದು ನಂಬಿ ಭತ್ತದ ನಾಟಿ ಮಾಡಿದ್ದರು. ಆದರೆ ಮಳೆಯ ಅಭಾವದಿಂದ ನದಿಯ ನೀರಿನಹರಿವು ಬತ್ತಿರುವುದರಿಂದ ನಾಟಿ ಮಾಡಿರುವ ಐದು ಸಾವಿರಕ್ಕು ಹೆಚ್ಚು ಎಕರೆ ಭತ್ತದ ನಾಟಿ ಒಣಗತೊಡಗಿದೆ. ಈ ಬೆಲಕೆಗಂತೂ ಸಧ್ಯಕ್ಕೆ ಮಳೆಯ ಅವಶ್ಯಕತೆ ಇದೆ.
ಮಳೆರಾಯನ ಕೃಪೆಯಾಗದಿಂದರೆ ರೈತರ ಬದುಕು ಅತಂತ್ರವಾಗಲಿದೆ.































