Home ಸುದ್ದಿ ರಾಷ್ಟ್ರೀಯ ದೇಶದ ಹಲವೆಡೆ ತಪ್ಪದ ಎಲ್‍ಪಿಜಿ ಬವಣೆ

ದೇಶದ ಹಲವೆಡೆ ತಪ್ಪದ ಎಲ್‍ಪಿಜಿ ಬವಣೆ

ನವದೆಹಲಿ,ಮಾ,14- ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಎಲ್ ಪಿಜಿ ಸಿಲಿಂಡರ್‍ಗಳಿಗಾಗಿ ಜನರು ಪರದಾಡುವಂತಾಗಿದೆ.

ಗೃಹ ಬಳಕೆಯ ಸಿಲಿಂಡರ್ ಜೊತೆಗೆ ಕಮರ್ಷಿಯಲ್ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ, ಜೊತೆಗೆ ಆದ್ಯತೆ ಮೇರೆಗೆ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಸಿಲಿಂಡರ್ ಸರಬರಾಜು ಮಾಡುವ ಕೆಲಸದಲ್ಲಿ ಕೇಂದ್ರ ಮತ್ತಯ ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ.

ವಿಶೇಷವಾಗಿ ಹಳೆ ದೆಹಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ, ನಿವಾಸಿಗಳು ಎಲ್‍ಪಿಜಿ ಸಿಲಿಂಡರ್ಗಳಿಗಾಗಿ ಪರದಾಡಿದ ಘಟನೆ ನಡೆದಿದೆ, ಉದ್ವಿಗ್ನತೆ ಹೆಚ್ಚಾದ ಕಾರಣ, ಕೆಲವು ಗ್ಯಾಸ್ ಏಜೆನ್ಸಿಗಳ ಹೊರಗೆ ಪೆÇಲೀಸರನ್ನು ನಿಯೋಜಿಸಬೇಕಾಗಿದ್ದು ಗ್ರಾಹಕರು ಮತ್ತು ಗ್ಯಾಸ್ ಏಜೆಂಟರ ನಡುವೆ ಮಾತಿನ ಚಕಮಕಿಯೂ ನಡೆದಿದೆ

ದೆಹಲಿ ಗೇಟ್‍ನಲ್ಲಿರುವ ಎಲ್‍ಪಿಜಿ ಏಜೆನ್ಸಿ ಕಚೇರಿಯ ಹೊರಗೆ ಗೃಹಬಳಕೆಯ ಸಿಲಿಂಡರ್ಗಳಿಗಾಗಿ ಉದ್ದನೆಯ ಸರತಿ ಸಾಲುಗಳು ಮತ್ತು ಜನದಟ್ಟಣೆ ಕಂಡುಬಂದಿದೆ. ಆನ್‍ಲೈನ್ ಬುಕಿಂಗ್ ಸರ್ವರ್‍ಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹಲವು ಆರೋಪಿಸಿದ್ದಾರೆ.

ಅಜ್ಮೇರಿ ಗೇಟ್‍ನ 60 ವರ್ಷದ ರಾಧಾ ರಾಣಿ ತನ್ನ ಮೊಮ್ಮಗನನ್ನು ಹಿಡಿದುಕೊಂಡು ಸಾಲಿನಲ್ಲಿ ನಿಂತು, ಮೂರು ದಿನಗಳಲ್ಲಿ ಖಾಲಿ ಕೈಯಲ್ಲಿ ಮನೆಗೆ ಮರಳುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮೂವರು ಗಂಡು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ನನ್ನ ಸೊಸೆಗೆ 15 ದಿನಗಳ ಹಿಂದೆ ಮಗು ಜನಿಸಿತು, ಮತ್ತು ನಾನು ಸತತ ಮೂರು ದಿನಗಳಿಂದ ಇಲ್ಲಿಗೆ ಬರುತ್ತಿದ್ದೇನೆ” ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿದೆ ಏನು ಮಾಡಬೇಕೋ ತಿಳಿಯುತ್ತಿಲ್ಲ ಎಂದು ತಮ್ಮ ಅಸಹಾಯಕತೆ ಹೊರ ಹಾಕಿದ್ದಾರೆ.

ಪ್ರದೇಶದ ನಿವಾಸಿಗಳು ಸಿಲಿಂಡರ್‍ಗಳನ್ನು ಮೊದಲೇ ಮನೆಗೆ ತಲುಪಿಸಲಾಗುತ್ತಿತ್ತು ಈಗ, ಅವರು ಏಜೆನ್ಸಿ ಕಚೇರಿಗಳು ಮತ್ತು ಗೋಡೌನ್‍ಗಳ ಹೊರಗೆ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು, ಆಗಾಗ್ಗೆ ಕೆಲಸ ಬಿಡಬೇಕಾಯಿತು. ಬೆಳಿಗ್ಗೆ 10.30 ರಿಂದ ಮಧ್ಯಾಹ್ನದ ನಡುವೆ ಜನದಟ್ಟಣೆಯ ಗರಿಷ್ಠ ಸಮಯದಲ್ಲಿ ಮೂವರು ಪುರುಷ ಅಧಿಕಾರಿಗಳು ಮತ್ತು ಮಹಿಳಾ ಕಾನ್‍ಸ್ಟೆಬಲ್ ಸೇರಿದಂತೆ ಪೆÇಲೀಸ್ ಸಿಬ್ಬಂದಿ ಹಾಜರಿದ್ದರು ಎಂದು ಹೇಳಿದ್ದಾರೆ.

ಅನಿಲಿ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಆನ್‍ಲೈನ್ ಬುಕಿಂಗ್ ಸರ್ವರ್‍ಗಳನ್ನು ನಿರ್ಬಂಧಿಸಲಾಗಿದೆ. ಒಬ್ಬ ವ್ಯಕ್ತಿ ವೆಬ್‍ಸೈಟ್‍ನಲ್ಲಿ ಪಟ್ಟಿ ಮಾಡಲಾದ ಏಜೆನ್ಸಿ ಸಂಖ್ಯೆಯನ್ನು ಡಯಲ್ ಮಾಡಿ ತನ್ನ ಫೋನ್ ಅನ್ನು ಎತ್ತಿ ಹಿಡಿದು ಕೇವಲ ಎರಡು ರಿಂಗ್‍ಗಳ ನಂತರ ಕರೆ ಹೇಗೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿದ್ದಾರೆ.