Home ಜಿಲ್ಲೆ ಮಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ೧೦.೬೧ ಕೋಟಿ ರೂ. ಲಾಭ: ರವಿರಾಜ ಹೆಗ್ಡೆ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ೧೦.೬೧ ಕೋಟಿ ರೂ. ಲಾಭ: ರವಿರಾಜ ಹೆಗ್ಡೆ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ೨೦೨೫-೨೬ನೆ ಸಾಲಿನಲ್ಲಿ ೧೦.೬೧ ಕೋಟಿ ರೂ. ಲಾಭಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ೨೦೨೫-೨೬ ನೆ ಸಾಲಿನಲ್ಲಿ ೧.೨೭೦ ಕೋಟಿ ಆರ್ಥಿಕ ವ್ಯವಹಾರ ನಡೆಸಿದೆ. ಕಳೆದ ವರ್ಷ ರೂ.೧,೧೭೪ ಕೋಟಿ ವ್ಯವಹಾರ ನಡೆಸಿದ್ದು, ಈ ಬಾರಿ ಶೇ೮.೧೮ರಷ್ಟು ಅಭಿವೃದ್ಧಿ ದಾಖಲಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.
೨೦೨೫-೨೬ ಸಾಲಿನಲ್ಲಿ ಅಂದಾಜು ೧೦.೬೧ ಕೋಟಿ ನಿವ್ವಳ ಲಾಭಗಳಿಸಿದೆ.ಕಳೆದ ಸಾಲಿನ ನಿವ್ವಳ ಲಾಭ ೧೨.೭೯ಕೋಟಿ ಆಗಿತ್ತು. ಒಕ್ಕೂಟ ೫೧,೬೯೩ಲೀ. ಸಂಖ್ಯೆಯ ಸಕ್ರಿಯ ಸದಸ್ಯವನ್ನು ಹೊಂದಿರುತ್ತವೆ. ೨೦೨೫-೨೬ ನೆ ಸಾಲಿನಲ್ಲಿ ಸರಾಸರಿ ದಿನವಹಿ ೪.೦೭ ಲಕ್ಷ ಲೀಟರ್ ಹಾಲು ಶೇಖರಣೆ ಯಾಗುತ್ತದೆ. ಹಾಲು ಶೇಖರಣೆ ಯಲ್ಲೂ ಶೇ೧೯ಪ್ರಗತಿ ಸಾಧಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಲೀಟರ್ ಒಂದಕ್ಕೆ ಈಗಾಗಲೇ ರೂ೧.೫೦ ಪ್ರೋತ್ಸಾಹಧನ ರೂಪದಲ್ಲಿ ನೀಡುತ್ತಿದ್ದು, ದಿನಾಂಕ ೨೧.೦೨.೨೦೨೬ ರಿಂದ ೩೧,೦೫೨೦೨೬ರವರೆಗೆ ವಿಶೇಷ ಪ್ರೋತ್ಸಾಹಧನವಾಗಿ ರೂ. ೧ನ್ನು ಸೇರಿ ಒಟ್ಟು ರೂ೨.೫೦/- ಲೀಟರ್ ಒಂದಕ್ಕೆ ಹೆಚ್ಚುವರಿ ದರದೊಂದಿಗೆ ಸದರಿ ಸಾಲಿನಲ್ಲಿ ಒಟ್ಟು ೨೩೯೯ ಕೋಟಿಗಳನ್ನು ಪ್ರೋತ್ಸಾಹಧನವಾಗಿ ನೀಡಲಾಗಿವೆ ಎಂದು ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಹೈನುಗಾರಿಕೆಗೆ ಪೂರಕವಾದ ವಿವಿಧ ಯೋಜನೆಗಳಾದ ಮಿನಿ ಡೇರಿ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್, ವಾಣಿಜ್ಯ ಡೇರಿ ಘಟಕ ಯೋಜನೆ. ಹಸಿರು ತಾಕು ಸ್ಥಾಪನೆ. ಹೊರ ರಾಜ್ಯದಿಂದ ರಾಸು ಖರೀದಿ, ಕರು ಸಾಕಾಣಿಕಾ ಯೋಜನೆಗಾಗಿ ಅನುದಾನಗಳ ರೂಪದಲ್ಲಿ ರೂ.೬.೬೪ ಕೋಟಿ ನೀಡಲಾಗಿರುತ್ತದೆ.ಹಾಲು ಶೇಖರಣಾ ಅಭಿವೃದ್ಧಿ ಗಾಗಿ ೨೦೨೬-೨೭ ನೇ ಸಾಲಿನಲ್ಲಿ ಮೇಲ್ಯಾಣಿಸಿದ ಯೋಜನೆಗಳೊಂದಿಗೆ ಕಡಸು ಅಭಿವೃದ್ಧಿ ಯೋಜನೆಗಾಗಿ ರೂ.೬೦ಲಕ್ಷಗಳನ್ನು ಕಾಯ್ದಿರಿಸಿದ್ದು. ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ರವಿರಾಜ್ ಮಾಹಿತಿ ನೀಡಿದರು.
ಒಕ್ಕೂಟದ ವ್ಯಾಪ್ತಿಯಲ್ಲಿ ೧,೭೮೧ ಸಕ್ರಿಯ ಡೀಲರ್ಗಳಿದ್ದು೪೨ ಪಾರ್ಲರ್ ,೯೧ ಫ್ರಾಂಚೈಸ್ ೧೫ ಟಿಸಿಡಿಗಳ ಮೂಲಕ ೨೦೨೫-೨೬ರಲ್ಲಿ ಪ್ರತಿದಿನ ೩,೮೭,೩೬೦ ಲೀಟರ್ ಹಾಲು, ೮೧,೯೭೯ ಕೆ.ಜಿ ಮೊಸರು,೨.೮ ಟನ್ ಪನೀರ್, ೬.೧ ಟನ್ ತುಪ್ಪ,೮೫೦ ಕೆ.ಜಿ ಸಿಹಿ ಉತ್ಪನ್ನ, ಲಸ್ಸಿ ೪,೨೫೦ ಲೀಟರ್,೨೦೦೦ಲೀಟರ್ ಸುವಾಸಿತ ಹಾಲು ಮಾರಾಟ ಮಾಡಿ ದಿನವಹಿ ರೂ.೩.೦೩ ಕೋಟಿ ಮಾರಾಟ ವ್ಯವಹಾರ ಆಗುತ್ತಿದೆ ಎಂದವರು ಮಾಹಿತಿ ನೀಡಿದರು.
ಒಕ್ಕೂಟದಲ್ಲಿ ನವೀನ ತಂತ್ರಜ್ಞಾನದ ಯಂತ್ರೋಪಕರಣಗಳನ್ನು, ನೂತನ ಗೋಡೌನ್, ಐಸ್ ಕ್ರೀಂ ಕೋಲ್ಡ್ ಸ್ಟೋರೇಜ್, ಮತ್ತು ನವೀಕರಿಸಿದ ರೆಫ್ರಿಜರೇಶನ್ ಘಟಕನ್ನು ರೂ.೧೨.೮೧ ಕೋಟಿ ವೆಚ್ಚದಲ್ಲಿ ನಿರ್ಮಿಸಿ ಬಳಸಲಾಗುತ್ತಿದೆ.
ಮಂಗಳೂರು ಕೇಂದ್ರ ಕಛೇರಿಯಲ್ಲಿ ರೂ.೭ ಕೋಟಿ ವೆಚ್ಚದಲ್ಲಿ ನೂತನ ಗೋಡೌನ್ ಮತ್ತು ಉಡುಪಿ ಡೇರಿಯಲ್ಲಿ ರೂ.೪.೨೫ ಕೋಟಿ ವೆಚ್ಚದಲ್ಲಿ ಆಡಳಿತ ಕಛೇರಿ ನಿರ್ಮಾಣ ಪ್ರಗತಿ ಹಂತದಲ್ಲಿದ್ದು, ಈ ಸಾಲಿನಲ್ಲಿ ಉದ್ಘಾಟನೆ ಗೊಳ್ಳಲಿದೆ ಮೆಗಾಡೇರಿ,ಐಸ್ ಕ್ರೀಂ ಪ್ಲಾಂಟ್,ಪನೀರ್ ಘಟಕ ,ನೀರು ಬಾಟ್ಲಿಂಗ್ ಘಟಕ ನಿರ್ಮಾಣ ಮುಂದಿನ ಯೋಜನೆ ಯಾಗಿದೆ ಎಂದು ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಸುಚರಿತ ಶೆಟ್ಟಿ, ನಿರ್ದೇಶಕರಾದ ಚಂದ್ರ ಶೇಖರ,ಮಮತಾ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಿ. ವಿವೇಕ್,(ಶೇಖರಣೆ ಮತ್ತು ತಾಂತ್ರಿಕ ವಿಭಾಗದ) ವ್ಯವಸ್ಥಾಪಕರಾದ ರವಿರಾಜ ಉಡುಪ ಮೊದಲಾದವರು ಉಪಸ್ಥಿತರಿದ್ದರು.