Home ಜಿಲ್ಲೆ ಡಿ.ಎಸ್.ಎಸ್. ನಿಂದ ಪೂರ್ವಭಾವಿ ಸಭೆ

ಡಿ.ಎಸ್.ಎಸ್. ನಿಂದ ಪೂರ್ವಭಾವಿ ಸಭೆ

ಸಂಜೆವಾಣಿ ವಾರ್ತೆ

 ಬಳ್ಳಾರಿ, ಮೇ.21 ನಗರ ಸ್ನೇಹ ಸಂಪುಟ ಹಾಲ್ ನಲ್ಲಿ ಡಿ.ಎಸ್.ಎಸ್ ನ ಪೂರ್ವಭಾವಿ ಸಭೆ ನಡೆಸಲಾಯಿತು ಈ ಸಭೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ)ಸಂಘಟನಾ ಸಂಸ್ಥಾಪಕರಾದ ಪರುಶುರಾಮ ನೀಲನಾಯಕ್  ಆಗಮಿಸಿ ಮುಂದಿನ ತಿಂಗಳು ಬೆಂಗಳೂರು ಟೌನ್ ಹಾಲ್ ನಲ್ಲಿ ನಡೆಯುವ ಪ್ರೊ||ಕೃಷ್ಣಪ್ಪ ರವರ 88ನೇ ಜಯಂತಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂಕನಾಯಕ ಪತ್ರಿಕೆ ಪುನಾರಂಭದ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಈ ಸಭೆಯಲ್ಲಿ ರಾಜ್ಯ ಸಂಚಾಲಕರಾದ ಓಂಕಾರಪ್ಪ ಕಪ್ಪಗಲ್ಲು ರಾಜ್ಯ ಖಜಾಂಚಿಯಾದ ಞ. ನಾಗರಾಜ ಜಿಲ್ಲಾ ಸಂಚಾಲಕರಾದ ಸಿ. ಲಿಂಗಪ್ಪ ಮಹಿಳಾ ಸಂಚಾಲಕರಾದ ತಿಮ್ಮಲಾಪುರ ಮಲ್ಲಮ್ಮ ಹಾಗೂ ಜಿಲ್ಲಾ ಸಂಚಾಲಕರಾದ ಚಂದ್ರಪ್ಪ ಲಿಂಗದೇವನಳ್ಳಿ ಚಂದ್ರಪ್ಪ ಗೊಟೂರು ಕಪ್ಪಾಗಲ್ಲು ಸುರೇಶ ನಾಗೇಂದ್ರ ಮೋಕಾ ರಾಘವೇಂದ್ರ ಇನ್ನು ಮುಂತಾದವರು ಭಾಗವಹಿಸಿದ್ದರು.