
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.25: ಗೋ ಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಏ. 27 ರಂದು ಬೆಳಿಗ್ಗೆ 9:30ಕ್ಕೆ ನಗರದಲ್ಲಿ ಗೋರಕ್ಷಣ ಅಭಿಯಾನದ ಮೆರವಣಿಗೆ ನಡೆಸಿ ಈ ಕುರಿತ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.
ನಗರದ ರಾಘವ ಕಲಾ ಮಂದಿರದಲ್ಲಿ ಸಭೆ ಸೇರಿ ಸ್ವಾಮೀಜಿ-ಸಂತರುಗಳ ಮಾರ್ಗದರ್ಶನ, ಸಮಾಜದ ಗಣ್ಯ ವ್ಯಕ್ತಿಗಳ ನೇತೃತ್ವದಲ್ಲಿ ಮೆರವಣಿಗೆಯೊಂದಿಗೆ ತೆರಳಿ ತಹಶೀಲ್ದಾರ್ರವರ ಮೂಲಕ ಸರ್ಕಾರಗಳಿಗೆ ಮನವಿ ಸಲ್ಲಿಸಲಿದೆ.
ಭಾರತದಾದ್ಯಂತ “ಗೋ ಅಭಿಯಾನ” ನಡೆಯುತ್ತಿದೆ. ಗೋವುಗಳ ರಕ್ಷಣೆಯಾಗಬೇಕು ಎಂಬ ಆಗ್ರಹದೊಂದಿಗೆ ದೇಶದಲ್ಲಿ “ಗೋಹತ್ಯೆ ನಿಷೇಧ ಮಸೂದೆ” ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎನ್ನುವ ಹಕ್ಕೊತ್ತಾಯವನ್ನು ಮಂಡಿಸಲು, ದೇಶದ ಐದು ಸಾವಿರ ತಾಲೂಕು ಕೇಂದ್ರಗಳಲ್ಲಿ ಸಹಿ ಸಂಗ್ರಹ ಚಳವಳಿಯೊಂದಿಗೆ ತಹಶೀಲ್ದಾರರವರ ಮೂಲಕ ಆಯಾ ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಮನವಿ ನೀಡುತ್ತಿದೆ
ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಹಿ ಸಂಗ್ರಹ ನಡೆಯುತ್ತಿದೆ. ಬಳ್ಳಾರಿ ಅಲ್ಲದೇ ಸಿರುಗುಪ್ಪ, ಕಂಪ್ಲಿ, ಕುರುಗೋಡು ಮತ್ತು ಸಂಡೂರು ಕೇಂದ್ರಗಳಲ್ಲಿ ಈ ತಿಂಗಳ 27ರಂದು ತಹಸೀಲ್ದಾರರ ಮೂಲಕ ಸಂಬಂಧಪಟ್ಟವರಿಗೆ ಮನವಿಗಳನ್ನು ಸಲ್ಲುಸಲಿದೆಂದು ಅಭಿಯಾನದ ಸಂಯೋಜಕ ಗುರುರಾಜ್. ಎಸ್. ತಿಳಿಸಿದ್ದಾರೆ






















