Home ಜಿಲ್ಲೆ ವಿದ್ಯಾನಿಕೇತನ ಶಾಲೆಗೆ ಶೇ 98 ಫಲಿತಾಂಶ

ವಿದ್ಯಾನಿಕೇತನ ಶಾಲೆಗೆ ಶೇ 98 ಫಲಿತಾಂಶ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.25: ಇಲ್ಲಿನ ಪಾರ್ವತಿ ನಗರದಲ್ಲಿ ಹೊಸೂರು ಪಾರ್ವತಮ್ಮ ಸಿದ್ದರಾಮನಗೌಡ ಟ್ರಸ್ಟ್ ನ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಶಾಲೆಯ ವಿದ್ಯಾರ್ಥಿ ಸಂದೀಪ್ ರಾಜ್ ಶೇ 96 ಮತ್ತು ವರುಣ್ ಕುಮಾರ್ ಶೇ 95 ರಷ್ಟು. 5 ವಿದ್ಯಾರ್ಥಿಗಳು ಕನ್ನಡ ಮತ್ತು 4 ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಮತ್ತು ಮುಖ್ಯೋಪಧ್ಯಾಯರು ಹಾಗೂ ಶಿಕ್ಷಕಿಯರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ.