
ಹೊಸಕೋಟೆ.ಮೇ೭: ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಉದ್ದೇಶದಿಂದಅಗತ್ಯವಾದಎಲ್ಲಾರೀತಿಯ ಸಹಕಾರವನ್ನು ಪುರುಷರು ನೀಡಬೇಕಿದೆ. ಅದರಂತೆತಾಲೂಕಿನಲ್ಲಿ ಪ್ರತಿಗ್ರಾಪಂ ವ್ಯಾಪ್ತಿಯಲ್ಲಿ ಮಹಿಳಾ ಕ್ರೀಡಾಕೂಟ ಆಯೋಜಿಸಿ ಮಹಿಳೆಯರಿಗೆ ಆತ್ಮಸ್ಥೆರ್ಯತುಂಬುವ ಕೆಲಸ ವನ್ನು ಶಾಸಕ ಶರತ್ ಬಚ್ಚೇಗೌಡರ ಸಹಕಾರದಿಂದ ಮಾಡಲಾಗುವುದುಎಂದು ಸಮಸ್ತ ಫೌಂಡೇಷನ್ ಸಂಚಾಲಕಿ, ಶಾಸಕ ಶರತ್ ಪತ್ನಿ ಪ್ರತಿಭಾ ಶರತ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಿಮಾಕನಪುರದಲ್ಲಿ ಮಹಿಳಾ ಕ್ರೀಡಾಕೂಟ ಹಾಗೂ ಮಕ್ಕಳ ಆಟೋಟ ಪರಿಕರಗಳನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಶರತ್ ಬಚ್ಚೇಗೌಡರ ಸಹಕಾರ ಪಡೆದು ಪ್ರತಿಗ್ರಾಪಂ ಮಟ್ಟದಲ್ಲಿಕ್ರೀಡಾಕೂಟ ಆಯೋಜಿಸಿ ಅವರಿಗೆ ಬಹುಮಾನ ವಿತರಿಸಿ ಗ್ರಾಮೀಣ ಮಹಿಳೆಯರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿ ಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದುಎಂದರು.
ಗ್ರಾಮ ಪಂಚಾಯತ್ಮಾ ಮಾಜಿ ಸದಸ್ಯತಮ್ಮಯ್ಯಗೌಡ ಮಾತನಾಡಿ, ನಮ್ಮಗ್ರಾಮದ ಸರ್ಕಾರಿ ಶಾಲೆ ಯನ್ನು ಖಾಸಗಿ ಶಾಲೆಯಷ್ಟೆ ಗುಣಮಟ್ಟವಾಗಿ ನಿರ್ಮಾಣ ಮಾಡಿಅಗತ್ಯ ಕಲಿಕಾ ಪರಿಕರಗಳನ್ನು ಒದಗಿಸಲಾಗುತ್ತಿದೆ. ಶಾಸಕ ಶರತ್ ಬಚ್ಚೇಗೌಡರು ಸಹ ಅಗತ್ಯಅನುದಾನವನ್ನು ಒದಗಿಸಿದ ಪರಿಣಾಮವಾಗಿಅಭಿವೃದ್ಧಿಯಲ್ಲಿ ಗ್ರಾಮವನ್ನು ಮಾದರಿಯನ್ನಾಗಿ ಮಾಡಲಾಗಿದೆಎಂದರು.
ಪಿಡಿಒರವಿಚಂದ್ರ, ವಿಎ ಸುಬ್ರಮಣಿ, ಮುಖಂಡವಿಜಯ್‌ಕುಮಾರ್, ಬಚ್ಚೇಗೌಡ, ಮಿಥುನ್, ಉದಯ್‌ಕುಮಾರ್, ವರುಣ್, ಮುಖ್ಯ ಶಿಕ್ಷಕಿ ಹಂಸ, ಸಹ ಶಿಕ್ಷಕಿಯರಾದ ಗಾಯತ್ರಿ, ಅರುಣ, ವಾಣಿಶ್ರೀ ಇದ್ದರು.





























