
ನವದೆಹಲಿ,ಏ.೨೨- ಯಾವುದೇ ರೀತಿಯ ಭಯೋತ್ಪಾದನೆ ಭಾರತ ತಲೆಬಾಗುವುದಿಲ್ಲ. ಉಗ್ರರ ಹೇಯಕೃತ್ಯಗಳು ಯಶಸ್ವಿಯಾಗಲು ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಇದೇ ವೇಳೆ ಪಹಲ್ಗಾಮ್ ವಿಧ್ವಂಸಕ ಕೃತ್ಯದಲ್ಲಿ ಮೃತಪಟ್ಟ ೨೬ ಮಂದಿಯ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ “ಒಂದು ರಾಷ್ಟ್ರವಾಗಿ, ದೃಢಸಂಕಲ್ಪದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ೨೦೨೫ರ ಏಪ್ರಿಲ್ ೨೨ ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಘೋರ ದಾಳಿ ರಾಷ್ಟ್ರದ ಆತ್ಮಸಾಕ್ಷಿಯ ಮೇಲೆ ನಡೆದ ದಾಳಿಯಾಗಿದೆ. ಇದು ಭಾರವಾದ ದುರಂತ ಎಂದು ವಿವರಿಸಿದ್ದಾರೆ
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದರು ದಾಳಿ ನಡೆಸಿ ೨೬ ಮಂದಿಯನ್ನಿ ಹತ್ಯೆ ಮಾಡಿದ ಮೊದಲ ವಾರ್ಷಿಕೋತ್ಸವದಂದು ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಿ, ಭಯೋತ್ಪಾದಕ ದಾಳಿಯನ್ನು ದೇಶ ಎಂದು ಮರೆಯುವುದಿಲ್ಲ ಹೇಳಿದ್ದಾರೆ
“ಕಳೆದ ವರ್ಷ ಈ ದಿನದಂದು ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಮುಗ್ಧ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ, ಅವರನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ನಷ್ಟವನ್ನು ನಿಭಾಯಿಸುತ್ತಿರುವ ಕುಟುಂಬಗಳೊಂದಿಗೆ ತಮ್ಮ ಸಂತಾಪ ಇರಲಿದೆ ಎಂದು ತಿಳಿಸಿದ್ದಾರೆ
ಕಳೆದ ವರ್ಷ ಏಪ್ರಿಲ್ ೨೨ ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ೨೬ ಜನರನ್ನು, ಹೆಚ್ಚಾಗಿ ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು.
ಭಯೋತಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ ೭ ರಂದು ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬಹು ಭಯೋತ್ಪಾದಕ ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿತ್ತು
ಭಾರತದ ವಿರುದ್ದ ಕೃತ್ಯಗಳಿಗೆ ತಕ್ಕ ಪಾಠ:
ಭಾರತೀಯ ಸೇನೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು ಭಾರತದ ವಿರುದ್ಧದ ಕೃತ್ಯಗಳಿಗೆ ಪ್ರತಿಕ್ರಿಯೆ “ಖಚಿತ” . ಸಂತ್ರಸ್ಥರಿಗೆ “ನ್ಯಾಯ ಒದಗಿಸಲಾಗುವುದು ಎಂದಿದೆ
ಇದಕ್ಕೂ ಮೊದಲು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮೊದಲ ವಾರ್ಷಿಕೋತ್ಸವದ ಮುನ್ನಾದಿನದಂದು, ಭಾರತೀಯ ಸೇನೆ ಭಯೋತ್ಪಾದನೆಯ ದುಷ್ಕರ್ಮಿಗಳಿಗೆ ಕಠಿಣ ಎಚ್ಚರಿಕೆ ನೀಡಿತ್ತು, “ಮಾನವೀಯತೆಯ ಗಡಿಗಳನ್ನು ದಾಟಿದಾಗ ಪ್ರತಿಕ್ರಿಯೆ ನಿರ್ಣಾಯಕವಾಗುತ್ತದೆ” ಎಂದು ಹೇಳಿದೆ
“ಮಾನವೀಯತೆಯ ಗಡಿಗಳನ್ನು ದಾಟಿದಾಗ, ಪ್ರತಿಕ್ರಿಯೆ ನಿರ್ಣಾಯಕವಾಗಿರುತ್ತದೆ. ನ್ಯಾಯ ಖಚಿತಪಡಿಸಲಾಗುತ್ತಿದೆ. ಭಾರತ ಒಗ್ಗಟ್ಟಾಗಿ ನಿಂತಿದೆ” ಎಂದು ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸುವ ಸಾಂಕೇತಿಕ ಗ್ರಾಫಿಕ್ ಹಂಚಿಕೊಂಡಿದೆ
ಬಿಗಿ ಭದ್ರತೆ ಹೆಚ್ಚಳ
ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಪಹಲ್ಗಾಮ್‌ನಲ್ಲಿ ಭದ್ರತೆ ಬಿಗಿ ಗೊಳಿಸಿದೆ. ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ ಮತ್ತು ಶಾಂತಿಯುತ ಸ್ಮರಣಾರ್ಥ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ರಾಜಕೀಯ ನಾಯಕರು, ನಾಗರಿಕ ಸಮಾಜದ ಸದಸ್ಯರು ಮತ್ತು ಬಲಿಪಶುಗಳ ಕುಟುಂಬಗಳು ಭಾಗವಹಿಸುವ ನಿರೀಕ್ಷೆಯಿದೆ.
ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಗೌರವವಾಗಿ, ಪಹಲ್ಗಾಮ್‌ನಲ್ಲಿ ಸ್ಮಾರಕ ನಿರ್ಮಿಸಲಾಗಿದೆ.
ಕಪ್ಪು ಅಮೃತಶಿಲೆಯಿಂದ ನಿರ್ಮಿಸಲಾದ ಎಲ್ಲಾ ೨೬ ಬಲಿಪಶುಗಳು, ೨೫ ಪ್ರವಾಸಿಗರು ಮತ್ತು ಸ್ಥಳೀಯ ಪೊನಿವಾಲ್ಲಾ ಆದಿಲ್ ಷಾ ಅವರ ಹೆಸರುಗಳನ್ನು ಹೊಂದಿದೆ ಮತ್ತು ಲಿಡ್ಡರ್ ನದಿಯ ದಡದಲ್ಲಿ ನಿರ್ಮಿಸಲಾಗಿದೆ.

























