Home ಮುಖಪುಟ ಸುದ್ದಿ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದ ವಿಶೇಷ ಮ್ಯಾಟ್ ಉತ್ಪಾದನೆ

ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದ ವಿಶೇಷ ಮ್ಯಾಟ್ ಉತ್ಪಾದನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ತೆಂಗಿನ ನಾರಿನ ಮ್ಯಾಟ್‌ಗಳು ಮತ್ತು ಇತರೆ ಉತ್ಪನ್ನಗಳನ್ನು ದೆಹಲಿಗೆ ಸರಬರಾಜು ಮಾಡುವ ವಾಹನಕ್ಕೆ ಚಾಲನೆ ನೀಡಿದರು. ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ನಟರಾಜ್ ಜಾನಕಿರಾಮ್, ಮುಖಂಡರಾದ ರವಿ ಬೋಸರಾಜು ಸೇರಿದಂತೆ ಅನೇಕರು ಈ ವೇಳೆ ಹಾಜರಿದ್ದರು.

ಬೆಂಗಳೂರು, ಏ. ೨೨- ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ತೆಂಗಿನ ನಾರಿನ ಮೂಲಕ ವಿವಿಧ ಮ್ಯಾಟ್ ಉತ್ಪಾದನೆ ಸೇರಿದಂತೆ ಇನ್ನಿತರ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಿದೆ. ಅದರ ಜತೆಗೆ ನಿಗಮದಿಂದಲೂ ವಿಶೇಷ ಮ್ಯಾಟ್ ಗಳನ್ನು ಉತ್ಪಾದಿಸಿ ರಫ್ತು ಮಾಡುವ ಕೆಲಸ ಮಾಡುತ್ತಿದೆ.

ಎಂದು ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್ ಹೇಳಿದರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಮ್ಯಾಟ್ ಗಳನ್ನು ಸಾಗಿಸುವ ವಾಹನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು


ಇದೀಗ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಉತ್ಪನ್ನಗಳಲ್ಲಿ ಅತ್ಯಂತ ಜನಪ್ರಿಯವಾದ “ಡಚ್ ಮ್ಯಾಟ್”ನ್ನು ತಯಾರಿಸಿ ರಫ್ತಿಗೆ ಮುಂದಾಗಿದೆ. ೧೮ ನೇ ಶತಮಾನದಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ತಯಾರಿಸಲ್ಪಟ್ಟ ಕಯರ್ ಮ್ಯಾಟ್ ಗಳನ್ನು ಡಚ್ ವ್ಯಾಪಾರಿಗಳು ಯುರೋಪಿಗೆ ರಫ್ತು ಮಾಡುತ್ತಿದ್ದರು, ಆದ್ದರಿಂದ ಈ ಮ್ಯಾಟ್ ಗಳು “ಡಚ್ ಮ್ಯಾಟ್” ಎಂದೇ ಜನಪ್ರಿಯವಾಗಿವೆ.


ನಿಗಮದ ಉತ್ಪಾದನಾ ಘಟಕಗಳಲ್ಲಿ ಡಚ್ ಮ್ಯಾಟ್ ಗಳನ್ನು ತಯಾರಿಸಲು, ಮೊದಲು ತೆಂಗಿನಕಾಯಿ ಸಿಪ್ಪೆಯನ್ನು ಸಂಗ್ರಹಿಸುತ್ತಾರೆ. ಈ ಸಿಪ್ಪೆಯನ್ನು ಯಂತ್ರದಲ್ಲಿ ಮೃದುಗೊಳಿಸಲಾಗುತ್ತದೆ. ನಂತರ ಸಿಪ್ಪೆಯನ್ನು ನೀರಿನಲ್ಲಿ ಕನಿಷ್ಠ ೭ ದಿನಗಳವರೆಗೆ ನೆನೆಸಿದ ನಂತರ ನಾರುಗಳನ್ನು ಬೇರ್ಪಡಿಸಲಾಗುತ್ತದೆ. ತೆಂಗಿನ ನಾರಿನ ಉದ್ದ ಸುಮಾರು ೭ ರಿಂದ ೮ ಇಂಚುಗಳು ಮತ್ತು ದಪ್ಪ ೦.೧ ರಿಂದ ೦.೬ ಮಿ.ಮೀ ಇರುತ್ತದೆ. ಎರಡು ನಾರುಗಳನ್ನು ೨ ಠಿಟಥಿ ಯಂತ್ರದಲ್ಲಿ ತಿರುಗಿಸಿ ಹುರಿ ತಯಾರಿಸಲಾಗುತ್ತದೆ, ನಂತರ ಹುರಿಗೆ ಬಣ್ಣ ಹಾಕಲಾಗುತ್ತದೆ. ಹುರಿಯನ್ನು ಹಸ್ತಚಾಲಿತ ಮ್ಯಾಟ್ ಗಳ ಫ್ರೇಮ್ ಬಳಸಿ ಡಚ್ ಮ್ಯಾಟ್ ನ್ನು ಹೆಣೆಯಲಾಗುತ್ತದೆ, ನಂತರ ಪ್ರೆಸಿಂಗ್ ಡೈಸ್ ನಲ್ಲಿ ಬಿಗಿಗೊಳಿಸಿದ ನಂತರ ಡಚ್ ಮ್ಯಾಟ್ ತಯಾರಾಗುತ್ತದೆ. ೧೪*೨೪ ಇಂಚಿನ ಡಚ್ ಮ್ಯಾಟ್ ೯೦೦ ಗ್ರಾಂ ತೂಕ ಹೊಂದಿದ್ದು, ಇದೇ ಅಳತೆಯ ಕಾರಿಡಾರ್ ಮ್ಯಾಟ್ ೧೦೬೦ ಗ್ರಾಂ ತೂಕ ಹೊಂದಿರುತ್ತದೆ.


ನಿಗಮದ ಡಚ್ ಮ್ಯಾಟ್ ಗಳು ಬಲಿಷ್ಠ, ದೀರ್ಘಕಾಲಿಕ, ಪರಿಸರ ಸ್ನೇಹಿ ಹಾಗೂ ಅಲಂಕಾರಿಕ ಗುಣಗಳನ್ನು ಹೊಂದಿರುವುದರಿಂದ ಇವುಗಳು ದೇಶಾದ್ಯಂತ ಜನಪ್ರಿಯವಾಗಿವೆ ಮತ್ತು ಉಪ ಹಿಮಾಲಯ ರಾಜ್ಯಗಳಲ್ಲಿ ಡಚ್ ಮ್ಯಾಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದರು .


ಮುಖ್ಯಮಂತ್ರಿಯವರ ಆಶಯದಂತೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರ ಮಾರ್ಗದರ್ಶನದಲ್ಲಿ ಹಸ್ತಚಾಲಿತ ಮ್ಯಾಟ್ ಫ್ರೇಮ್ ಬಳಸಿ ಸುಮಾರು ೭೦೦ ಗ್ರಾಮೀಣ ಉದ್ಯೋಗ ಸೃಷ್ಟಿಸಲು ಕ್ರಮವಹಿಸಲಾಗುತ್ತಿದೆ.


ನಿಗಮದ ಉತ್ಪನ್ನಗಳ ಮಾರಾಟ ಹೆಚ್ಚಿಸಲು “ಛಿoiಡಿಞಚಿಡಿಟಿಚಿಣಚಿಞಚಿ.iಟಿ” ವೆಬ್ ಸೈಟ್ ಸಿದ್ದಪಡಿಸಿ ಇದರೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಡಿಜಿಟಲ್ ಮಾರಾಟ ಸಹಯೋಗದೊಂದಿಗೆ ಒoU ಮಾಡಿಕೊಂಡು e-ಛಿommeಡಿಛಿe ತಿebsiಣe “ಛಿoiಡಿemಠಿoತಿeಡಿ.ಛಿom” ನ್ನು ಸಿದ್ದಪಡಿಸಲಾಗಿದೆ. ಮೌಲ್ಯದ ಅಮೃತ್ ಚಹಾ ಇವರ ೮೦ಕ್ಕೂ ಹೆಚ್ಚು ಮಳಿಗೆಗಳಲ್ಲಿ ತೆಂಗಿನ ನಾರಿನ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟವನ್ನು ಉತ್ತೇಜಿಸಲು ಕ್ರಮವಹಿಸಲಾಗುತ್ತಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ನವ ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ್ ದಲ್ಲಿ Sಣoಛಿಞisಣ ಛಿum ಈoಡಿತಿಚಿಡಿಜiಟಿg ಚಿಟಿಜ ಅಚಿಡಿಡಿಥಿiಟಿg ಚಿgeಟಿಣ ರನ್ನು ನೇಮಿಸಲು ಕ್ರಮವಹಿಸಲಾಗುತ್ತಿದೆ. ಎಂದರು


ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುವ ಡಚ್ ಮ್ಯಾಟ್, ಕಾರಿಡಾರ್ ಮ್ಯಾಟ್, ರೋಲಿಂಗ್ ಮ್ಯಾಟ್, ಜಿಯೋ ಟೆಕ್ಸ್ ಟೈಲ್ಸ್, ಡೆಸ್ಕ್ ಕಯರ್ ಹಾಸಿಗೆ ಮತ್ತು ದಿಂಬು ನಿಜವಾದ ಹಸಿರು ಉತ್ಪನ್ನಗಳಾಗಿವೆ. ಇವುಗಳ ಉತ್ಪಾದನೆಯಲ್ಲಿ ತೊಡಗಿರುವ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವನ್ನು ಬಳಸಿರಿ ಮತ್ತು ನಾವೆಲ್ಲರೂ ತೆಂಗಿನ ನಾರಿನ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸೋಣ. ಎಂದು ಅವರು ತಿಳಿಸಿದರು