Home ಜಿಲ್ಲೆ ಅಕ್ರಮ ಗಣಿಗಾರಿಕೆಯ ವಿರುದ್ಧ ಸಿಡಿದ್ದೆದ್ದ ಗ್ರಾಮಸ್ಥರು

ಅಕ್ರಮ ಗಣಿಗಾರಿಕೆಯ ವಿರುದ್ಧ ಸಿಡಿದ್ದೆದ್ದ ಗ್ರಾಮಸ್ಥರು


ಲಕ್ಷೆ÷್ಮÃಶ್ವರ,ಮೇ.೧೦: ತಾಲ್ಲೂಕಿನ ಆದರಹಳ್ಳಿ ಗ್ರಾಮದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿಯೇ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಅರಣ್ಯ ಇಲಾಖೆಯವರು ಪೊಲೀಸ್ ಇಲಾಖೆಯವರು ವಹಿಸಿರುವ ಮೌನಕ್ಕಾಗಿ ಇಡಿ ಗ್ರಾಮಕ್ಕೆ ಗ್ರಾಮವೇ ಸಂಕಷ್ಟದಲ್ಲಿದೆ ಈಗ ಇದುವರೆಗೂ ಹಿಡಿದಿಟ್ಟುಕೊಂಡಿದ್ದ ಸಹನೆಯ ಕಟ್ಟೆ ಒಡೆದು ಗ್ರಾಮಸ್ಥರು ಅಕ್ರಮ ಗಣಿಗಾರಿಕೆಯ ವಿರುದ್ಧ ಸಿಡಿದ್ದೆದ್ದು ಬಿದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಕ್ರಷರ್ ಮಾಲೀಕರು ಅಕ್ರಮವಾಗಿ ಬಂಡೆ ಗಲ್ಲುಗಳನ್ನು ಸ್ಪೋಟಿಸಲು ಸಿಡಿಮದ್ದುಗಳನ್ನು ಉಪಯೋಗಿಸುತ್ತಿರುವುದರಿಂದ ಗ್ರಾಮಗಳಲ್ಲಿನ ಮನೆಗಳಲ್ಲಿ ಗೋಡೆಗಳು ಬಿರುಕು ಬಿಟ್ಟು ಪರಿತಪ್ಪಿಸುತ್ತಿದ್ದರೆ ನೂರಾರು ಟಿಪ್ಪರಗಳು ಕ್ರಷರಗಳು ಓಡಾಡುತ್ತಿರುವುದರಿಂದ ಭಾರಿ ಪ್ರಮಾಣದ ಧೂಳು ಉಂಟಾಗಿ ಅನೇಕ ರೋಗರುಜಿನಗಳಿಗೆ ಜನರು ಬಲಿಯಾಗುತ್ತಿದ್ದರೆ ಇನ್ನೊಂದು ಕಡೆ ಭಾರಿ ಪ್ರಮಾಣದ ಮದ್ದು ಸಿಡಿಸುತ್ತಿರುವುದರಿಂದ ಕೊಳವೆ ಬಾವಿಗಳಲ್ಲಿನ ಜಲಾಶಯದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಇಷ್ಟೇಲ್ಲಾ ಅನಾಹುತ ಆಗುತ್ತಿದ್ದರು ಅಧಿಕಾರಿಗಳ ಮೌನದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಕ್ರಮ ಗಣಿಗಾರಿಕೆಯಿಂದ ನಾವು ವಾಸಿಸುತ್ತಿರುವ ಗೋಡೆಗಳು ಬೀರುಕು ಬಿಟ್ಟಿವೆ ಹಾಗೂ ನಿರಂತರವಾಗಿ ಟಿಪ್ಪರ ಓಡಾಟದಿಂದ ಧೂಳಿನಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬಿದ್ದು ಎಷ್ಟೋ ಜನರು ಆಸ್ಪತ್ರೆಗೆ ಸೇರಿದ್ದಾರೆ ಹಾಗೂ ಗಣಿಗಾರಿಕೆಯಿಂದ ಕುಡಿಯುವ ನೀರಿನ ಕೊಳವೆ ಬಾವಿಗಳು ಬತ್ತಿ ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರ ಮತ್ತು ಗಣಿ ಇಲಾಖೆಯವರು ಮಧ್ಯಪ್ರವೇಶಿಸಿ ಈ ಅಕ್ರಮ ಚಟುವಟಿಕೆಯನ್ನು ನಿಲ್ಲಿಸಬೇಕು ಜಿಲ್ಲಾಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕು ಗಣಿಗಾರಿಕೆಗೆ ಬಳಸುವ ಸ್ಪೋಟಕಗಳಿಂದ ಮನೆಗಳಿಗೆ ಹಾನಿಯಾಗಿದ್ದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಪ್ರಭಾವಿ ಮುಖಂಡರಿಗೆ ಯಾವುದೇ ಮುಲಾಜಿಲ್ಲದೆ ಗಣಿಗಾರಿಕೆಗೆ ಕಣ್ಣುಮುಚ್ಚಿ ಆದೇಶ ನೀಡುತ್ತಿರುವುದರಿಂದ ಈ ಭಾಗದ ಗ್ರಾಮಸ್ಥರು ನಿತ್ಯ ವೇದನೆ ಅನುಭವಿಸುತ್ತಿದ್ದರೂ ಮೌನ ವಹಿಸಿರುವುದು ಮತ್ತು ಆದರಹಳ್ಳಿ ಗ್ರಾಮದ ಸುತ್ತಮುತ್ತಲಿರುವ ಕ್ರಷರ್ ಗಳು ಪ್ರಭಾವಿಗಳಿಗೆ ಸೇರಿರುವ ಸೇರಿರುವುದರಿಂದ ಅಧಿಕಾರಿಗಳು ಸಹ ಮೌನಕ್ಕೆ ಶರಣಾಗಿದ್ದಾರೆ ಎಂಬ ಸಾರ್ವತ್ರಿಕ ಟೀಕೆ ಕೇಳಿಬರುತ್ತಿದೆ.
ಕಿರಣ ಲಮಾಣಿ, ಉಮೇಶ ಲಮಾಣಿ ನರಸಪ್ಪ ಡಾಓ ಕೃಷ್ಣ ನಾಯಕ ರಮೇಶ ಲಮಾಣಿ ದೇವಪ್ಪ ಲಮಾಣಿ ಆನಂದ ಲಮಾಣಿ ಪ್ರಕಾಶ ಲಮಾಣಿ ಶೇಖಪ್ಪ ಲಮಾಣಿ ಶಂಕ್ರಪ್ಪ ಲಮಾಣಿ ಮಹಾಂತೇಶ ಲಮಾಣಿ ರವಿ ಲಮಾಣಿ ದುಂಡೇಪ್ಪ ಲಮಾಣಿ ಅಪ್ಪಣ್ಣ ಲಮಾಣಿ ಪ್ರಕಾಶ ಲಮಾಣಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.